Evening Vastu Tips: ಮುಸ್ಸಂಜೆಯಲ್ಲಿ ಮಾಡುವ ಈ ತಪ್ಪುಗಳಿಂದ ನಾಶವಾಗುತ್ತೆ ಮನೆಯ ಸಂಪತ್ತು

Mon, 21 Nov 2022-10:28 am,

ಮುಸ್ಸಂಜೆಯಲ್ಲಿ ಕಸ ಗುಡಿಸುವುದು: ಸೂರ್ಯಾಸ್ತದ ಸಮಯದಲ್ಲಿ ಮತ್ತು ಅದರ ನಂತರ ಕಸ ಗುಡಿಸುವುದನ್ನು ತಪ್ಪಿಸಬೇಕು.  ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಬಡತನವು ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ.

ಸಂಜೆ ನಿದ್ರಿಸುವುದು: ಮನೆಯಲ್ಲಿ ಹಿರಿಯರು ಮುಸ್ಸಂಜೆ ಹೊತ್ತಲ್ಲಿ ಮಲಗದಂತೆ ಸಲಹೆ ನೀಡುತ್ತಾರೆ. ಆದಾಗ್ಯೂ, ಕೆಲವರಿಗೆ ಸಂಜೆ ವೇಳೆ ನಿದ್ರಿಸುವ ಅಭ್ಯಾಸ ಇರುತ್ತದೆ. ಆದರೆ, ಸಂಜೆ ಮಲಗುವುದನ್ನು ತುಂಬಾ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ.  ಸೂರ್ಯಾಸ್ತದ ಸಮಯದಲ್ಲಿ ಮಲಗುವುದು ಅನೇಕ ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ಈ ಸಮಯವು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿ ಮನೆ ಪ್ರವೇಶಿಸುವ ಸಮಯವಾದ್ದರಿಂದ ಸಂಜೆ ಹೊತ್ತಲ್ಲಿ ಮಾಡುವ ಈ ತಪ್ಪಿನಿಂದ ತಾಯಿ ಕೋಪಗೊಳ್ಳುತ್ತಾರೆ. ಈ ಸಮಯದಲ್ಲಿ ಮಲಗುವುದರಿಂದ ಹಣದ ನಷ್ಟ, ಆದಾಯದಲ್ಲಿ ಅಡಚಣೆ ಉಂಟಾಗುತ್ತದೆ ಮತ್ತು ಆಯುಷ್ಯವೂ ಕಡಿಮೆಯಾಗುತ್ತದೆ ಎನ್ನಲಾಗುವುದು.

ತುಳಸಿಯನ್ನು ಸ್ಪರ್ಶಿಸುವುದು:  ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ ಪೂಜ್ಯ ಸಸ್ಯವೆಂದು ಪರಿಗಣಿಸಲಾಗಿದೆ. ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟುವುದು ತುಂಬಾ ಅಶುಭ. ಹಾಗೆಯೇ, ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.   

ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು: ಸಂಜೆಯ ವೇಳೆಯಲ್ಲಿ ಯಾರೂ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಹಾಗೆ ಮಾಡುವುದು ತುಂಬಾ ಅಶುಭ. ಸಂಜೆಯ ವೇಳೆ ಹೊಸ್ತಿಲಲ್ಲಿ ಜನರು ಕುಳಿತಿರುವ ಮನೆಗೆ ತಾಯಿ ಲಕ್ಷ್ಮಿ ಪ್ರವೇಶಿಸುವುದಿಲ್ಲ ಎನ್ನಲಾಗುವುದು.

ಸಂಜೆ ಬಿಳಿ ವಸ್ತುಗಳ ದಾನ: ಸೂರ್ಯಾಸ್ತದ ಸಮಯದಲ್ಲಿ ಮತ್ತು ನಂತರ ಮೊಸರು, ಹಾಲು, ಉಪ್ಪು ದಾನ ಮಾಡಬಾರದು. ಈ ವಸ್ತುಗಳು ತಾಯಿ ಲಕ್ಷ್ಮಿಗೆ ಸಂಬಂಧಿಸಿವೆ ಮತ್ತು ಸಂಜೆ ಈ ವಸ್ತುಗಳನ್ನು ದಾನ ಮಾಡುವುದರಿಂದ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಇದರಿಂದ ಅಂತಹ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗಿ ಹಣದ ಕೊರತೆ ಕಾಡುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link