ಈ ತರಕಾರಿಯನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ತಿನ್ನಿ!ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುವುದು ನೂರಕ್ಕೆ ನೂರು ಖಚಿತ !
ಯಾರಿಗೇ ಆಗಲಿ ಮಧುಮೇಹ ಇದ್ದಾಗ ಅವರು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ವಿಪರೀತ ಕಾಳಜಿ ವಹಿಸಬೇಕು. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರು ಕಂಡು ಬರುವುದು ಖಂಡಿತಾ.
ಆದರೆ ಕೆಲವು ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.ಅಂಥಹ ಒಂದು ತರಕಾರಿ ತೊಂಡೆಕಾಯಿ.
ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಹೇರಳವಾಗಿ ಕಂಡುಬರುತ್ತವೆ. ಇದು ಶುಗರ್ ಅನ್ನು ನಿಯಂತ್ರಣ ಮಾಡುವ ಅಂಶಗಳೇ.
ತೊಂಡೆಕಾಯಿಯಲ್ಲಿ ಕಡಿಮೆ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್ ಇರುತ್ತದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ತರಕಾರಿಯನ್ನು ಹೀಗೆಯೇ ತಿನ್ನಬೇಕು ಎನ್ನುವ ನಿಯಮವಿಲ್ಲ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಸೇವಿಸಬಹುದು. ಆದರೆ ಎಣ್ಣೆ, ಮಸಾಲೆ ಕಡಿಮೆಯಿದ್ದರೆ ಸಾಕು,
ತೊಂಡೆಕಾಯಿ ಯಲ್ಲಿ ಹೇರಳವಾದ ಫೈಬರ್ ಅಂಶವಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಶುಗರ್ ಕಡಿಮೆಯಾಗಲು ಇದೂ ಒಂದು ಕಾರಣ.
ಇದು ಕಡಿಮೆ ಕ್ಯಾಲೊರಿ ಹೊಂದಿರುವ ತರಕಾರಿ.ಹಾಗಾಗಿ ಬೊಜ್ಜು ನಿಯಂತ್ರಣದಲ್ಲಿ ಇಡಲು ಇದು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ