Expensive Cars in 2024: ಹೊಸ ವರ್ಷಕ್ಕೆ ಈ ಕಾರುಗಳು ಮತ್ತಷ್ಟು ದುಬಾರಿ!

Sun, 10 Dec 2023-10:13 am,

2023ರ ನವೆಂಬರ್ ಅಂತ್ಯದ ವೇಳೆಗೆ ಮಾರುತಿ ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಿಸಿತು. 2024ರ ಜನವರಿಯಿಂದ ಹೊಸ ದರಗಳು ಜಾರಿಗೆ ಬರಲಿವೆ. ಸರಕುಗಳ ಬೆಲೆ ಹೆಚ್ಚಳ ಮತ್ತು ಹಣದುಬ್ಬರದ ಕಾರಣ ನೀಡಿ ಕಂಪನಿ ಬೆಲೆ ಏರಿಕೆ ಮಾಡಿದೆ.

2024 ಜನವರಿಯಿಂದ ಜಾರಿಗೆ ಬರುವಂತೆ ಜನಪ್ರಿಯ ಜನಪ್ರಿಯ ಕಾರು ಕಂಪನಿ ಹುಂಡೈ ತನ್ನ ವಿವಿಧ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ವೆಚ್ಚ ಹೆಚ್ಚಳ, ಅಧಿಕ ವಿನಿಮಯ ದರ ಮತ್ತು ಸರಕುಗಳ ಬೆಲೆ ಏರಿಕೆ ಕಾರಣ ನೀಡಿ ಕಂಪನಿಯು ಬೆಲೆ ಏರಿಕೆ ಘೋಷಿಸಿದೆ.

ಟಾಟಾ ಮೋಟಾರ್ಸ್ ತನ್ನ ICE ಮತ್ತು EV ಸೇರಿದಂತೆ ಎಲ್ಲಾ ಮಾಡೆಲ್‌ಗಳ ಬೆಲೆಯನ್ನು 2024ರ ಜನವರಿಯಿಂದ ಹೆಚ್ಚಿಸುವುದಾಗಿ ತಿಳಿಸಿದೆ. ಟಾಟಾ ಪ್ರಸ್ತುತ EV ಸೇರಿದಂತೆ 10ಕ್ಕೂ ಹೆಚ್ಚು ಮಾಡೆಲ್‍ಗಳ ಕಾರುಗಳನ್ನು ಹೊಂದಿದೆ.  

ದೇಶದ ಜನಪ್ರಿಯ ಕಾರು ಉತ್ಪಾದಕ ಕಂಪನಿ ಮಹೀಂದ್ರ & ಮಹೀಂದ್ರ ಕೂಡ ತನ್ನ ಕಾರುಗಳ ಬೆಲೆ ಏರಿಸುವುದಾಗಿ ತಿಳಿಸಿದೆ. ಎಲ್ಲಾ XUV400 EV ಸೇರಿದಂತೆ ಮಹೀಂದ್ರ ಮಾಡೆಲ್‌ಗಳು 2024ರ ಜನವರಿಯಿಂದ ಮತ್ತಷ್ಟು ದುಬಾರಿಯಾಗಲಿವೆ. ಅಧಿಕ ವೆಚ್ಚ ಮತ್ತು ಹಣದುಬ್ಬರದ ಕಾರಣ ನೀಡಿ ಕಂಪನಿಯು ಬೆಲೆ ಏರಿಕೆ ಘೋಷಿಸಿದೆ.

ಜನಪ್ರಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆ ಆಡಿ ಸಹ 2024ರ ಜನವರಿಯಿಂದ ಜಾರಿಗೆ ಬರುವಂತೆ ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅಧಿಕ ವೆಚ್ಚದ ಕಾರಣ ನೀಡಿ ಬೆಲೆ ಏರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಆಡಿ ಒಟ್ಟು 15 ಮಾಡೆಲ್‌ಗಳನ್ನು ಹೊಂದಿದ್ದು, ಈ ಪೈಕಿ 4 EV ಸಹ ಸೇರಿವೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link