Expensive Celebrity Divorces: ವಿಚ್ಛೇದನಕ್ಕಾಗಿ ಈ ಸೆಲೆಬ್ರಿಟಿ ನೀಡಿದ ಬೆಲೆ 380 ಕೋಟಿ ರೂ.

Tue, 10 Jan 2023-9:59 am,

ಹೃತಿಕ್ ರೋಷನ್-ಸುಸಾನ್  : ಹೃತಿಕ್ 2014 ರಲ್ಲಿ ತಮ್ಮ ಪತ್ನಿ ಸುಸಾನ್  ಖಾನ್ ಗೆ  ವಿಚ್ಛೇದನ ನೀಡಿದ್ದರು. ಈ ಮೂಲಕ 14 ವರ್ಷಗಳ ದಾಂಪತ್ಯ ಕೊನೆಯಾಗಿತ್ತು.  ಮಾಧ್ಯಮ ವರದಿಗಳ ಪ್ರಕಾರ ಹೃತಿಕ್ ವಿಚ್ಛೇದನದ ಬದಲು ಸುಸ್ಸಾನ್ ಗೆ 380 ಕೋಟಿ ರೂ. ಜೀವನಾಂಶ ನೀಡಿದ್ದಾರೆ. 

ಮಲೈಕಾ ಅರೋರಾ-ಅರ್ಬಾಜ್ ಖಾನ್: ಮಲೈಕಾ ಮತ್ತು ಅರ್ಬಾಜ್ ಖಾನ್ ಅವರ ಹಲವು ವರ್ಷಗಳ ಸಂಬಂಧ ಕೂಡಾ ಪರಸ್ಪರ ಒಪ್ಪಿಗೆಯೊಂದಿಗೆ ಕೊನೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅರ್ಬಾಜ್ ಮಲೈಕಾಗೆ 10-15 ಕೋಟಿ ಜೀವನಾಂಶವನ್ನು ನೀಡಿದ್ದರು. ಆದರೆ ಮಲೈಕಾ ಮಾತ್ರ ಇದನ್ನೂ ಪಡೆದುಕೊಳ್ಳಲಿಲ್ಲ. 

ಸಂಜಯ್ ಕಪೂರ್-ಕರಿಷ್ಮಾ ಕಪೂರ್: ಕರಿಷ್ಮಾ ಕಪೂರ್ ಉದ್ಯಮಿ ಸಂಜಯ್ ಕಪೂರ್ ಅವರ ವಿವಾಗ ಅತ್ಯಂತ ವೈಭವದಿಂದ ನೆರವೇರಿತ್ತು. ಆದರೆ ಈ ಮದುವೆ ಕೂಡಾ 13 ವರ್ಷಗಳಲ್ಲಿ ಮುರಿದುಬಿತ್ತು. ಸಂಜಯ್ ವಿಚ್ಛೇದನದ ಬದಲು ಕರಿಷ್ಮಾಗೆ ಮುಂಬೈನಲ್ಲಿರುವ ತನ್ನ ಪೂರ್ವಜರ ಮನೆಯನ್ನು ನೀಡಿದ್ದರು. ಇದರೊಂದಿಗೆ 14 ಕೋಟಿ ರೂ. ಜೀವನಾಂಶ ನೀಡಿದ್ದಾರೆ. 

ಸಂಜಯ್ ದತ್-ರಿಯಾ ಪಿಳ್ಳೈ: ಸಂಜಯ್ ದತ್ ತನ್ನ ಮೊದಲ ಪತ್ನಿ ರಿಚಾ ದತ್ ಸಾವಿನ ನಂತರ ರಿಯಾ ಪಿಳ್ಳೈ ಅವರನ್ನು ವಿವಾಹವಾದರು.  ಆದರೆ ಈ ವಿವಾಹ ಬಹಳ ದಿನಗಳವರೆಗೆ ಉಳಿಯಲಿಲ್ಲ. ಈ ವಿಚ್ಛೇದನದ ಬದಲು ಸಂಜಯ್ ರಿಯಾಗೆ ಮುಂಬೈನಲ್ಲಿ 8 ಕೋಟಿ ಮೌಲ್ಯದ ಬಂಗಲೆಯನ್ನು ನೀಡಿದ್ದರು.

ಸೈಫ್ ಅಲಿ ಖಾನ್-ಅಮೃತಾ ಸಿಂಗ್: ಸೈಫ್ ಮೊದಲು ಮದುವೆಯಾದದ್ದು ಅಮೃತಾ ಸಿಂಗ್ ಅವರನ್ನು. ಇಬ್ಬರ ದಾಂಪತ್ಯ 13 ವರ್ಷಗಳಲ್ಲಿ ಕೊನೆಯಾಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಅಮೃತಾಗೆ ಸೈಫ್ 5 ಕೋಟಿ ಜೀವನಾಂಶ ನೀಡಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link