ಅಮೆಜಾನ್ ಸೇಲ್‌ನಲ್ಲಿ ಐಫೋನ್ ಸೇರಿದಂತೆ ದುಬಾರಿ ಸ್ಮಾರ್ಟ್‌ಫೋನ್‌ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯ
Apple iPhone 12 (128GB) ಬಿಡುಗಡೆಯ ಬೆಲೆ 64,900 ರೂ. ಆಗಿದೆ, ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಐಫೋನ್ ಅನ್ನು 55,900 ರೂ.ಗೆ ಖರೀದಿಸಬಹುದು. ಫೋನ್ ಖರೀದಿಸಲು ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿದರೆ, ನಿಮಗೆ 1,250 ರೂಪಾಯಿ ರಿಯಾಯಿತಿ ಸಿಗುತ್ತದೆ. ಇದರೊಂದಿಗೆ ಈ ಐಫೋನ್ ಬೆಲೆ 54,650 ರೂ.ಗಳಿಗೆ ಲಭ್ಯವಾಗಲಿದೆ. ಆದರೆ, ಈ ಫೋನ್ ಖರೀದಿಯಲ್ಲಿ 18,050 ರೂ.ಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನಿಮ್ಮ ಹಳೆಯ ಫೋನ್‌ನ ವಿನಿಮಯದಲ್ಲಿ ನೀವು ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಈ ಕೊಡುಗೆ ಲಭ್ಯವಾಗಲಿದೆ. ಈ ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ನೀವು ಸಮರ್ಥರಾದರೆ ಫೋನ್ 36,600 ರೂ.ಗಳಿಗೆ ಲಭ್ಯವಾಗಲಿದೆ.
ಸ್ಯಾಮ್‌ಸಂಗ್ ನ ಜನಪ್ರಿಯ ಫೋನ್ Samsung Galaxy S22 5G ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ವಾಸ್ತವವಾಗಿ, ಈ ಫೋನ್ ಲಾಂಚಿಂಗ್ ಬೆಲೆ 85,999 ರೂ.ಗಳು. ಆದರೆ ಈ ಸೇಲ್‌ನಲ್ಲಿ ಫೋನ್ 49,999 ರೂ.ಗೆ ಲಭ್ಯವಿದೆ. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಫೋನ್ ಖರೀದಿಸಿದರೆ ಇದರಲ್ಲಿ 1,250 ರೂ. ಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದೆ.
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 39,990ರೂ. ಮೌಲ್ಯದ iQOO 9 SE 5G ಸ್ಮಾರ್ಟ್‌ಫೋನ್ ಅನ್ನು 28,990 ರೂ.ಗಳಿಗೆ ಖರೀದಿಸಬಹುದು. ನೀವು ಈ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 2,250 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಇದರ ನಂತರ, 18,050 ರೂಪಾಯಿಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ಈ ಎಲ್ಲಾ ರಿಯಾಯಿತಿಗಳನ್ನು ಪಡೆಯಲು ಶಕ್ತರಾದರೆ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ನಿಮ್ಮದಾಗಿಸಬಹುದು.
ಜನಪ್ರಿಯ ಜಲನಿರೋಧಕ ಸ್ಮಾರ್ಟ್‌ಫೋನ್ ಆಗಿರುವ Samsung Galaxy A73 5G ಮೂಲ ಬೆಲೆ 49,999ರೂ.ಗಳು ಆದರೆ, ಈ ಫೋನ್ ಅಮೆಜಾನ್ ಸೇಲ್‌ನಲ್ಲಿ 41,899 ರೂ.ಗಳಿಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿ ಮಾಡಿದರೆ 1,250 ರೂ.ಗಳ ರಿಯಾಯಿತಿ ಲಭ್ಯವಿರುತ್ತದೆ. ಅದರ ನಂತರ, ಫೋನ್‌ನಲ್ಲಿ 18,050 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ.
49,990 ರೂ. ಮೌಲ್ಯದ iQOO 9 5G ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 42,990 ರೂ.ಗಳಿಗೆ ಲಭ್ಯವಾಗಲಿದೆ. ಈ ಫೋನ್ ಖರೀದಿಸುವಾಗ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ನಿಮಗೆ 1,250 ರೂ ರಿಯಾಯಿತಿ ಸಿಗುತ್ತದೆ. ಇದಲ್ಲದೇ 28,050 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಕೂಡ ಇದರಲ್ಲಿ ಲಭ್ಯವಿದೆ.