Eyelid Twitch Causes And Treatment- ಕಣ್ಣು ಹಾರುವುದು ಅಶುಭ ಸಂಕೇತವಲ್ಲ, ಈ ಗಂಭೀರ ಕಾಯಿಲೆಯ ಲಕ್ಷಣ, ತಕ್ಷಣ ಅಭ್ಯಾಸಗಳನ್ನು ಬದಲಿಸಿಕೊಳ್ಳಿ
1. ಕಣ್ಣು ಏಕೆ ಹಾರುತ್ತವೆ (Eyelid Twitch)? - ಕಣ್ಣು ಹಾರುವ ಸಮಸ್ಯೆ ಶುಭ ಅಥವಾ ಅಶುಭ ಸಂಕೇತಗಳಿಗೆ ಸಂಬಂಧಿಸಿದ್ದಲ್ಲ. ಇದೊಂದು ಕಣ್ಣಿನ ಸ್ನಾಯು ಸೆಳೆತದ ಒಂದು ಪ್ರಕಾರ. ವೈದ್ಯಕೀಯ ಶಾಸ್ತ್ರದಲ್ಲಿ ಇದಕ್ಕೆ ಮೂರು ಪ್ರಕಾರಗಳಿವೆ. ಮಯೊಕೆಮಿಯಾ (Myokymia), ಬೆಪೆರೋಸ್ಪಾಸಂ (Blepharospasm) ಹಾಗೂ ಹೆಮಿಫೆಸಿಯಲ್ಸ್ಪಾಸಂ (Hemifacialspasam)
2. ಯಾವ ಕಂಡಿಶನ್ ಪ್ರಭಾವ (Eyelid Twitch Causes)- ಮಯೋಕೆಮಿಯಾ ಸೆಳೆತದ ಕಾರಣ ಉಂಟಾಗುವ ಸಮಸ್ಯೆ. ಇದರಲ್ಲಿ ಕಣ್ಣುಗಳ ಕೆಳಗಿನ ರೆಪ್ಪೆಯ ಮೇಲೆ ಹೆಚ್ಚು ಪ್ರಭಾವ ಉಂಟಾಗುತ್ತದೆ. ಇದು ಕೇವಲ ಸ್ವಲ್ಪ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬ್ಲೆಫೆರೋಪಾಸಂ ಹಾಗೂ ಹೆಮಿಫೆಸಿಯಲ್ಪ್ಲಾಸಂ ಎರಡೂ ಗಂಭೀರ ಆರೋಗ್ಯ ಸಮಸ್ಯೆಗಳಾಗಿವೆ. ಇದಕ್ಕೆ ಆನುವಂಶಿಕ ಕಾರಣ ಕೂಡ ಇದೆ. ಬ್ಲೆಫೆರೋಸ್ಪಾಸಂನಿಂದ ಮನುಷ್ಯರ ಕಣ್ಣು ಕೂಡ ಮುಚ್ಚಿಹೋಗುತ್ತವೆ. ಅಂದರೆ ಈ ಸಮಸ್ಯೆಗೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
3. ಬ್ರೇನ್ ಅಥವಾ ನರ್ವ್ ಡಿಸ್ಆರ್ಡರ್ ಆಗಿಲ್ಲ ತಾನೇ? (Eyelid Twitch Treatment) - ವೈದ್ಯರು ಹೇಳುವ ಪ್ರಕಾರ ಬ್ರೇನ್ ಅಥವಾ ನರ್ವ್ಸ್ ಡಿಸ್ಆರ್ಡರ್ ಮೂಲಕ ಕೂಡ ಮನುಷ್ಯರ ಕಣ್ಣು ಹಾರುತ್ತವೆ. ಜೀವನಶೈಲಿಯಲ್ಲಿನ ಕೆಲ ಕೊರತೆಗಳ ಕಾರಣ ಕೂಡ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
4. ಒತ್ತಡವನ್ನು ನಿಯಂತ್ರಿಸಿ (Eyelid Twitch Prevention) - ಈ ಸಮಸ್ಯೆಗೆ ಒತ್ತಡ ಕೂಡ ಒಂದು ಮುಖ್ಯಕಾರಣವಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಸ್ಟ್ರೆಸ್ ಕಾರಣ ಕೂಡ ಕೆಲವರಲ್ಲಿ ಕಣ್ಣು ಹಾರುವ ಸಮಸ್ಯೆ ಎದುರಾಗುತ್ತದೆ. ಹೀಗಿರುವಾಗ ಒಂದು ವೇಳೆ ನಿಮ್ಮ ಕಣ್ಣು ಕೂಡ ಹಾರುತ್ತಿದ್ದರೆ, ಕೂಡಲೇ ಒತ್ತಡ ಕಡಿಮೆ ಮಾಡಿಕೊಳ್ಳಿ.
5. ಕಣ್ಣುಗಳಿಗೆ ಆರಾಮ ನೀಡಿ - ಕಣ್ಣುಗಳ ದಣಿಯುವಿಕೆ ಕೂಡ ಈ ಸಮಸ್ಯೆಗೆ ಕಾರಣ ಎಂದು ವೈದ್ಯರು ಹೇಳುತ್ತಾರೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ಇಡೀ ದಿನ ಕಂಪ್ಯೂಟರ್ ಮೇಲೆ ಕುಳಿತುಕೊಳ್ಳುತ್ತಿದ್ದರೆ ಅಥವಾ ಟಿವಿ ಮುಂದೆ ಕುಳಿತುಕೊಳ್ಳುತ್ತಿದ್ದರೆ ಅಥವಾ ಮೊಬೈಲ್ ಸ್ಕ್ರೀನ್ ಮೇಲೆ ಕಾಲ ಕಳೆಯುತ್ತಿದ್ದರೆ, ಅವುಗಳನ್ನು ತಕ್ಷಣ ದೂರ ಮಾಡಿ.
6. ಸಾಕಷ್ಟು ನಿದ್ದೆ ಮಾಡಿ - ಸಾಮಾನ್ಯವಾಗಿ ಕೆಲಸದ ನಿಮಿತ್ತ ಅಥವಾ ಓಡಾಟ ಭರಿತ ಜೀವನ ಶೈಲಿಯ ಕಾರಣ ಸಾಕಷ್ಟು ನಿದ್ರೆ ಮಾಡುವುದಿಲ್ಲ. ಇದರಿಂದಲೂ ಕೂಡ ಕಣ್ಣು ಹಾರುವ ಸಮಸ್ಯೆ ಬರುತ್ತದೆ. ಹೀಗಾಗಿ ಸಾಕಷ್ಟು ನಿದ್ರೆ ಮಾಡಿ. ವೈದ್ಯರು ಹೇಳುವ ಪ್ರಕಾರ ವ್ಯಕ್ತಿಯೊಬ್ಬ ದಿನದಲ್ಲಿ 7 ರಿಂದ 8 ಗಂಟೆ ನಿದ್ರಿಸಲೇಬೇಕು.