Eyesight Improve Food: ಕಣ್ಣುಗಳ ಕಾಂತಿಯನ್ನು ಹೆಚ್ಚಿಸಲು ನಿಮ್ಮ ಡಯಟ್ ನಲ್ಲಿ ಈ ಆಹಾರಗಳನ್ನು ಶಾಮೀಲುಗೊಳಿಸಿ
1. ಕಣ್ಣುಗಳ ವ್ಯಾಯಾಮ ಮಾಡಿ - ದೇಹದ ಸದೃಢತೆಗೆ ವ್ಯಾಯಾಮ ಎಷ್ಟು ಅಗತ್ಯವೋ, ಕಣ್ಣುಗಳ ಆರೋಗ್ಯಕ್ಕೂ ಕೂಡ ಕಣ್ಣುಗಳ ವ್ಯಾಯಾಮದ ಅವಶ್ಯಕತೆ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
2. ಮೀನುಗಳ ಸೇವನೆಯಿಂದ ಕಣ್ಣುಗಳ ಕಾಂತಿ ಹೆಚ್ಚಾಗಲಿದೆ - ಮೀನು ಕಣ್ಣುಗಳ ಕಾಂತಿ ಹೆಚ್ಚಿಸಲು ತುಂಬಾ ಲಾಭಕಾರಿಯಾಗಿದೆ. ನಾನ್-ವೆಜ್ ಸೇವಿಸಿವ ಜನರು ತಮ್ಮ ಡಯಟ್ ನಲ್ಲಿ ಮೀನನ್ನು ಸೇರಿಸಲು ಮರೆಯಬಾರದು. ಇದರಿಂದ ನಿಮ್ಮ ಕಣ್ಣುಗಳ ಕಾಂತಿ ಖಂಡಿತ ಹೆಚ್ಚಾಗಲಿದೆ.
3. ಬಾದಾಮಿ ಸೇವನೆಯಿಂದಲೂ ಕೂಡ ಕಣ್ಣುಗಳ ಕಾಂತಿ ಹೆಚ್ಚಾಗುತ್ತದೆ - ಕಣ್ಣುಗಳ ಕಾಂತಿ ಹೆಚ್ಚಳಕ್ಕೆ ಬಾದಾಮ್ ಸೇವನೆ ಕೂಡ ತುಂಬಾ ಮುಖ್ಯವಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಅಂದರೆ, ಬಾದಾಮ್ ಸೇವಿಸದೆ ಇರುವವರು ತಮ್ಮ ಡಯಟ್ ನಲ್ಲಿ ಬಾದಾಮ್ ಅನ್ನು ಖಂಡಿತ ಶಾಮೀಲುಗೊಳಿಸಿ.
4. ಕಣ್ಣುಗಳ ಆರೋಗ್ಯಕ್ಕೆ ಲಾಭಕಾರಿ ಗಜ್ಜರಿ - ಗಜ್ಜರಿ ಕಣ್ಣುಗಳ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ನೀವು ಗಜ್ಜರೆಯ ಜ್ಯೂಸ್ ಅನ್ನು ಕೂಡ ಸೇವಿಸಬಹುದು ಹಾಗೂ ಅದನ್ನು ಸಲಾಡ್ ರೂಪದಲ್ಲಿಯೂ ಕೂಡ ಸೇವಿಸಬಹುದು. ಇದರಿಂದ ನಿಮ್ಮ ಕಣ್ಣುಗಳ ಕಾಂತಿ ಖಂಡಿತ ಹೆಚ್ಚಾಗಲಿದೆ.
5, ಮೊಟ್ಟೆ ಸೇವನೆಯಿಂದಲೂ ಕೂಡ ಕಣ್ಣುಗಳ ಕಾಂತಿ ಹೆಚ್ಚಾಗುತ್ತದೆ- ಮೊಟ್ಟೆಗಳ ಸೇವನೆ ಕೂಡ ನಿಮ್ಮ ಕಣ್ಣುಗಳ ಕಾಂತಿ ಹೆಚ್ಚಿಸುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಎ ಮತ್ತು ಪೋಷಕಾಂಶವಾಗಿರುವ ಲ್ಯೂಟಿನ್ ಇದ್ದು, ಇವು ಕಣ್ಣುಗಳ ಕಾಂತಿ ಹೆಚ್ಚಿಸುವಲ್ಲಿ ಲಾಭಕಾರಿಯಾಗಿವೆ. ಮೊಟ್ಟೆಯನ್ನು ನೀವು ಯಾವುದೇ ರೂಪದಲ್ಲಿ ಸೇವಿಸಬಹುದು. ಅಷ್ಟೇ ಅಲ್ಲ ಅದನ್ನು ನೀವು ಕಚ್ಚಾ ರೂಪದಲ್ಲಿಯೂ ಕೂಡ ಸೇವಿಸಬಹುದು.