Chest Pain: ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಈ ರೋಗಗಳ ಅಪಾಯದ ಗಂಟೆಯೂ ಆಗಿರಬಹುದು!

Mon, 08 Jan 2024-12:40 pm,

ಪದೇ ಪದೇ ಎದೆನೋವು ಕಾಣಿಸಿಕೊಳ್ಳಲು ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಇದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ವಾಸ್ತವವಾಗಿ, ಆಗಾಗ್ಗೆ ನಿಮ್ಮನ್ನು ಕಾಡುವ ಎದೆನೋವು ಅಪಾಯಕಾರಿ ಕಾಯಿಲೆಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. ತಜ್ಞರ ಪ್ರಕಾರ, ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಈ 5 ಕಾಯಿಲೆಗಳ ಪಾಯದ ಸಂಕೇತವೂ ಆಗಿರಬಹುದು ಎನ್ನಲಾಗುತ್ತದೆ. ಅವುಗಳೆಂದರೆ... 

ಹೃದಯಾಘಾತ:  ನಿಮಗೆ ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು ಹೃದಯಾಘಾತದ ಅಪಾಯವನ್ನು ಸೂಚಿಸಬಹುದು. ಹಾಗಾಗಿ, ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಅಲ್ಸರ್ ಅಪಾಯ:  ಆಗಾಗ್ಗೆ ಕಾಣಿಸಿಕೊಳ್ಳುವ ಎದೆನೋವು ಗ್ಯಾಸ್ಟ್ರಿಕ್ ನಿಂದ ಇರಬಹುದು ಎಂದು ಕೆಲವರು ಸುಮ್ಮನಾಗುತ್ತಾರೆ. ಆದರಿದು ಹೊಟ್ಟೆ ಹುಟ್ಟು ಅಥವಾ ಅಲ್ಸರ್ ಅಪಾಯದ ಸಂಕೇತವೂ ಆಗಿರಬಹುದು. 

ಪ್ಯಾನಿಕ್ ಅಟ್ಯಾಕ್:  ಹಲವು ಸಂದರ್ಭಗಳಲ್ಲಿ ಪ್ಯಾನಿಕ್ ಅಟ್ಯಾಕ್ ಆಗುವ ಮೊದಲು ಈ ರೀತಿ ಆಗಾಗ್ಗೆ ಎದೆನೋವು ಕಾಣಿಸಿಕೊಳ್ಳುವ ಸಂಭವವಿರುತ್ತದೆ ಎಂದು ಹೇಳಲಾಗುತ್ತದೆ. 

ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್:  ಪದೇ ಪದೇ ಕಾಡುವ ಎದೆನೋವು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ನಂತಹ ಗಂಭೀರ ಆರೋಗ್ಯ ಸಮಸ್ಯೆಯನ್ನೂ ಉಂಟು ಮಾಡಬಹುದು ಎನ್ನಲಾಗುತ್ತದೆ. 

ಪೆರಿಕಾರ್ಡಿಟಿಸ್:  ಆಗಾಗ್ಗೆ ಕಾಣಿಸಿಕೊಳ್ಳುವ ಎದೆನೋವು ಪೆರಿಕಾರ್ಡಿಟಿಸ್ ನ ಮುನ್ಸೂಚನೆಯೂ ಆಗಿರಬಹುದು. ಪೆರಿಕಾರ್ಡಿಟಿಸ್ ಸಂದರ್ಭದಲ್ಲಿ ಹೃದಯದ ಸುತ್ತಲೂ ಊತ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿಯೂ ಪದೇ ಪದೇ ಎದೆನೋವು ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link