ಈ ನಟಿಗಾಗಿ ಯುವರಾಜ್-ಧೋನಿ ಮಧ್ಯೆ ನಡೆದಿತ್ತು ಮಾರಾಮಾರಿ! ಕುಚುಕು ಗೆಳೆತನದಲ್ಲಿ ಬಿರುಕಾಗಲು ಕಾರಣವಾದ ಬ್ಯೂಟಿ ಬೇರಾರು ಅಲ್ಲ... ಆ ಕನ್ನಡತಿ!!
ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರು ಎಂಬುದು ತಿಳಿದಿರುವ ಸಂಗತಿ. ಇವರ ಜೊತೆಯಾಟದಿಂದ ಅದೆಷ್ಟೋ ಪಂದ್ಯಗಳನ್ನು ಭಾರತ ಗೆದ್ದಿದೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ʼನಲ್ಲಿ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅದ್ಭುತವಾಗಿ ಆಡಿದ್ದರು.
ತುಂಬಾ ಕ್ಲೋಸ್ ಆಗಿರುವ ಇವರಿಬ್ಬರ ನಡುವೆ ಬಾಲಿವುಡ್ ನಟಿಯೊಬ್ಬರ ಕಾರಣದಿಂದ ವೈಮನಸ್ಸು ಉಂಟಾಗಿತ್ತು ಎಂಬುದು ನಿಮಗೆ ತಿಳಿದಿದೆಯೇ? ಆ ಸಮಯದಲ್ಲಿ ಈ ಸುದ್ದಿ ಸಂಚಲನ ಮೂಡಿಸಿತ್ತು. 2007ರ ವಿಶ್ವಕಪ್ ನಂತರ, ಯುವರಾಜ್ ಸಿಂಗ್ ಮತ್ತು ಧೋನಿ ಮುಖ ನೋಡಿಕೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ದರು.
ಇಬ್ಬರೂ ಒಂದೇ ತಂಡದಲ್ಲಿದ್ದರೂ ಸಹ ಮೈದಾನದ ಹೊರಗೆ ಮಾತು ನಿಲ್ಲಿಸಿದ್ದರು. ಇದಕ್ಕೆ ಕಾರಣವಾಗಿದ್ದು ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಎನ್ನಲಾಗುತ್ತಿದೆ.
ಈ ಸಮಯದಲ್ಲಿ ಎಂಎಸ್ ಧೋನಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳು ಹರಡಿದ್ದವು. ದೀಪಿಕಾ ಪಡುಕೋಣೆಗೆ ಸಂಬಂಧಿಸಿದ ಸಿನಿಮಾವೊಂದರ ಪ್ರಮೋಷನ್ ಬಗ್ಗೆ ಧೋನಿ ಶಾರುಖ್ ಜೊತೆ ಮಾತನಾಡಿದ್ದು ಗೊತ್ತೇ ಇದೆ. ಸಮಾರಂಭವೊಂದರಲ್ಲಿ, ಧೋನಿ ಮತ್ತು ಯುವರಾಜ್ ಸಿಂಗ್ ದೀಪಿಕಾ ಪಡುಕೋಣೆ ಅವರ ನೃತ್ಯ ಕಾರ್ಯಕ್ರಮಕ್ಕೆ ಒಟ್ಟಿಗೆ ಹೋಗಿದ್ದರು. ಆಕೆ ಡ್ಯಾನ್ಸ್ ಮಾಡುವಾಗ ಇಬ್ಬರು ಪಿಸುಗುಟ್ಟುತ್ತಾ, ಕೀಟಲೆ ಮಾಡಿ ನಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.
ಆದರೆ ಅದಾದ ನಂತರ ಧೋನಿ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದ ದೀಪಿಕಾ ಪಡುಕೋಣೆ ಇದ್ದಕ್ಕಿದ್ದಂತೆ ಯುವರಾಜ್ ಸಿಂಗ್ ಜೊತೆ ಡೇಟಿಂಗ್ ಆರಂಭಿಸಿದ್ದರು. ಇದರಿಂದ ಧೋನಿ ಯುವರಾಜ್ ಸಿಂಗ್ ಮೇಲೆ ಕೋಪಗೊಂಡಿದ್ದರು. ಅಂದಿನಿಂದ ಯುವರಾಜ್ ಸಿಂಗ್ ದೂರವಾಗತೊಡಗಿದರು.
2011ರ ವಿಶ್ವಕಪ್ ಬಳಿಕ ಯುವರಾಜ್ ಸಿಂಗ್ ಅವರನ್ನು ಧೋನಿ ತಂಡದಿಂದ ಸಂಪೂರ್ಣವಾಗಿ ತೆಗೆದುಹಾಕಿದ್ದರು. ಆದರೆ ಯುವಿ-ದೀಪಿಕಾ ಪಡುಕೋಣೆ ಸಂಬಂಧ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. "ಯುವರಾಜ್ ವರ್ತನೆ ನನಗೆ ಇಷ್ಟವಿಲ್ಲ" ಎಂದು ದೀಪಿಕಾ ಬಹಿರಂಗವಾಗಿ ಹೇಳಿದ್ದರು. "ಯುವಿ ತುಂಬಾ ಪೊಸೆಸಿವ್ ಆಗಿದ್ದು ನಟನೆಗೆ ಅಡ್ಡಿಯಾಗುತ್ತಾನೆ" ಎಂದಿದ್ದರು.
ಟೀಂ ಇಂಡಿಯಾಗೆ ಹಲವು ಅದ್ಭುತ ವಿಜಯಗಳನ್ನು ನೀಡಿರುವ ಯುವಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ದೀಪಿಕಾ ಪಡುಕೋಣೆಯಿಂದಾಗಿ ಧೋನಿ ಮತ್ತು ಯುವರಾಜ್ ಸಿಂಗ್ ನಡುವಿನ ಅಂತರ ಇನ್ನೂ ಉಳಿದಿದೆ ಎಂದು ಹೇಳಲಾಗುತ್ತಿದೆ.