ಐಶ್ವರ್ಯಾ ಎಲಿಮಿನೇಟ್ ಬೆನ್ನಲ್ಲೇ ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಹೊರಕ್ಕೆ!? ಅಸಲಿ ಫೋಟೋ ವೈರಲ್
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಳೆದ ದಿನವಷ್ಟೇ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಐಶ್ವರ್ಯಾ ಶಿಂಧೋಗಿ ಮನೆಯಿಂದ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಶಾಕಿಂಗ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಉಗ್ರಂ ಮಂಜು ಅವರು ಹೊರ ಬಂದು ಮ್ಯಾಕ್ಸ್ ಸಿನಿಮಾ ನೋಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಈ ಪೋಸ್ಟ್ ಎಷ್ಟರ ಮಟ್ಟಿಗೆ ಸತ್ಯಕ್ಕೆ ಸಮೀಪ ಎಂಬುದನ್ನು ಮುಂದೆ ತಿಳಿಯೋಣ.
ಬಿಗ್ ಬಾಸ್ ಮನೆಗೆ ಕಾಲಿಟ್ಟವರು ಎಲಿಮಿನೇಟ್ ಹೊರತಾಗಿ ಹೊರಬರುವಂತಿಲ್ಲ. ಆದರೆ ಉಗ್ರ ಮಂಜು ಹೊರಬಂದಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಮಂಜು ಅವರು ಬಿಗ್ ಬಾಸ್ ಮನೆಯ ಪ್ರಮುಖ ಕಂಟೆಸ್ಟೆಂಟ್. ಇವರು, ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾ ಕಳೆದ ವಾರವಷ್ಟೇ ತೆರೆ ಕಂಡಿದ್ದು, ಇದನ್ನು ನೋಡಲೆಂದು ಉಗ್ರಂ ಮಂಜು ಅವರು ರಿಯಾಲಿಟಿ ಶೋ ಬಿಟ್ಟು ಹೊರಹೋಗಿದ್ದಾರೆ ಎಂದು ಸುಳ್ಳು ಮಾಹಿತಿ ಹಂಚಿಕೊಳ್ಳಲಾಗಿದೆ.
ಎಕ್ಸ್ ಬಳಕೆದಾರ shashii_twitz ಎಂಬವರು ಡಿಸೆಂಬರ್ 29 ರಂದು ಉಗ್ರಂ ಮಂಜು, ಚಿತ್ರಮಂದಿರದಲ್ಲಿ ನಿಂತು ಅಭಿಮಾನಿಗಳಿಗೆ ಸೆಲ್ಫೀ ನೀಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. "ಇಂದು ಬೆಳಿಗ್ಗೆ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು #MaxTheMovie ಸಿನಿಮಾ ನೋಡಿ ಮರಳಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಆದರೆ ಈ ಬಗ್ಗೆ ಅಸಲಿಯತ್ತು ಏನೆಂದು ಸಜಗ್ ಚೆಕ್ ಮಾಡಿದಾಗ, ಇದು ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. ಏಕೆಂದರೆ ಈ ವಿಡಿಯೋ ಮತ್ತು ಫೋಟೋಗಳಲ್ಲಿ ಉಗ್ರಂ ಮಂಜು ಅವರ ಗಡ್ಡ-ಕೂದಲು ಉದ್ದವಾಗಿ ಬಿಟ್ಟಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಮಂಜು ಸಂಪೂರ್ಣ ಹೇರ್ ಕಟ್ ಮಾಡಿಸಿದ್ದು ಗಡ್ಡ ಕೂಡ ಟ್ರಿಮ್ ಮಾಡಿಸಿಕೊಂಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಇದು ಸುಳ್ಳು ಪೋಸ್ಟ್ ಎಂದು ಖಚಿತವಾಗುತ್ತದೆ. ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿಲ್ಲ. ಇದು ಈ ಹಿಂದೆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆದ ವಿಡಿಯೋ ಆಗಿದ್ದು, ಪ್ರಸ್ತುತ ದಿಕ್ಕುತಪ್ಪಿಸಲು ವೈರಲ್ ಮಾಡಲಾಗಿದೆ ಎಂಬುದು ಸಜಗ್ ನಡೆಸಿದ ಫ್ಯಾಕ್ಟ್ ಚೆಕ್ ಮೂಲಕ ದೃಢವಾಗಿದೆ.