ಗಂಡನಿಂದಲೇ ಮೋಸ ಹೋಗಿ.. ಸಿನಿರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ? ಇವರ ಪತಿ ಯಾರು ಗೊತ್ತೇ?
ನಟಿ ಸಾಕ್ಷಿ ಶಿವಾನಂದ್ ಏಪ್ರಿಲ್ 15,1976 ಮುಂಬೈನಲ್ಲಿ ಜನಿಸಿದರು.. ಇವರು ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಭಾಷೆಗಳಲ್ಲಿ ಮಿಂಚಿ ಟಾಪ್ ನಟಿ ಎನಿಸಿಕೊಂಡಿದ್ದರು..
ಯಾವುದೇ ಪಾತ್ರ ಕೊಟ್ಟರೂ ಅಚ್ಚುಕಟ್ಟಾಗಿ ಮಾಡಿ ಎಲ್ಲರೂ ಸಿಳ್ಳೆ ಚಪ್ಪಾಳೆ ಹೊಡೆಯುವಂತೆ ಮಾಡುತ್ತಿದ್ದರು.. ಒಂದು ಕಾಲದಲ್ಲಿ ಇವರ ಸಿನಿಮಾ ಎಂದರೇ ಒಂದು ಹಬ್ಬದಂತಿತ್ತು..
ಇವರು ಖ್ಯಾತ ನಟ ನಿರ್ದೇಶಕ ಎಸ್ ನಾರಾಯಣ್ ನೇತೃತ್ವದ ಸಿನಿಮಾ ಗಲಾಟೆ ಅಳಿಯಂದ್ರು ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟರು.. ಇದನ್ನು ಕುಮಾರಸ್ವಾಮಿ ಅವರ ನಿರ್ಮಾಣ ಮಾಡಿದ್ದರು..
ಮೊದಲ ಸಿನಿಮಾದಿಂದಲೇ ಎಲ್ಲರ ಗಮನ ಸೆಳೆದ ನಟಿ ಸಾಕ್ಷಿ ಶಿವರಾಜ್ ಕುಮಾರ್ ಅವರಂತಹ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ನಂತರ ಅವರು ನಟ ಯೋಗೇಶ್ ಅಭಿನಯದ ಸೈನಿಕ ಸಿನಿಮಾದಿಂದ ದೊಡ್ಡ ಹೆಸರು ಮಾಡಿದರು..
ಮುಂದೆ ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದ ಸಮಯದಲ್ಲಿ ನಟಿ ಸಾಕ್ಷಿ ಶಿವಾನಂದ್ ಅಮೇರಿಕಾಗೆ ಹೋಗಿ ಮ್ಯಾನೆಜ್‌ಮೆಂಟ್ ಕೋರ್ಸ್ ಮಾಡಿಕೊಂಡರು.. ಜೊತೆಗೆ ಸಾಗರ್ ಎಂಬುವರೊಂದಿಗೆ ತಮ್ಮ ಸಹಜೀವನ ನಡೆಸಿದರು.. ಆತನಿಗೆ ಆರ್ಥಿಕ ಸಹಾಯವನ್ನೂ ಮಾಡಿದರು..
ಆದರೆ ಆತ ನಟಿಯ ಹಣವನ್ನು ಮಾತ್ರ ಪ್ರೀತಿಸುತ್ತಿದ್ದ ಎನ್ನುವುದು ಆಕೆಗೆ ತಿಳದಿರಲಿಲ್ಲ.. ಕೆಲ ಸಮಯದ ನಂತರ ಈ ವಿಚಾರ ನಟಿಗೆ ಗೊತ್ತಾಗಿ ಅವರ ಆತನಿಂದ ದೂರವಾಗಿ ಅಮೇರಿಕಾದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ..
ಹೀಗೆ ಪ್ರೀತಿಸಿ ಮದುವೆಯಾದ ಗಂಡನಿಂದಲೇ ಮೋಸ ಹೋದ ಸಾಕ್ಷಿ ಶಿವಾನಂದ್ ಕೊನೆಯದಾಗಿನ ನಟಿಸಿದ್ದು, ರವಿಚಂದ್ರನ್ ಅಭಿನಯದ ಪರಮಶಿವ ಸಿನಿಮಾ..
ನಟಿ ಸಾಕ್ಷಿ ಶಿವಾನಂದ್ ಕನ್ನಡ ಮಾತ್ರವಲ್ಲದೇ ಹಲವಾರು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಒಟ್ಟು ಅವರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇಂತಹ ಪ್ರತಿಭಾನ್ವಿತ ನಟಿ ಸಿನಿರಂಗದಿಂದ ದೂರವಾಗಿರೋದು ನಮ್ಮೆಲ್ಲರ ದುರಾದೃಷ್ಟ..