Fake Vaccination:ಏನಿದು Fake Covid Vaccination? ಲಸಿಕಾ ಕೇಂದ್ರ ನಕಲಿಯಾಗಿದೆ ಎಂದು ಹೇಗೆ ಪತ್ತೆಹಚ್ಚಬೇಕು?

Tue, 29 Jun 2021-1:33 pm,

1. ಒಂದೆಡೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ವ್ಯಾಕ್ಸಿನೆಶನ್ ಕೈಗೊಳ್ಳುವಂತೆ ಸೂಚಿಸಲಾಗುತ್ತಿದ್ದರೆ, ಇನ್ನೊಂದೆಡೆ ನಕಲಿ ವ್ಯಾಕ್ಸಿನ್ಗಳ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿವೆ. ಒಂದಾದ ಮೇಲೊಂದರಂತೆ ಹಲವು ರಾಜ್ಯಗಳಿಂದ ಇಂತಹ ಸುದ್ದಿಗಳು ಪ್ರಕಟಗೊಳ್ಳುತ್ತಲೆ ಇವೆ. ಹಲವು ಕಡೆಗಳಲ್ಲಿ ನಕಲಿ ವ್ಯಾಕ್ಸಿನೆಶನ್ ರಾಕೆಟ್ ಗಳನ್ನು ಕೂಡ ಬಯಲಿಗೆಳೆಯಲಾಗಿದೆ.  ಈ ನಕಲಿ ವ್ಯಾಕ್ಸಿನ್ ನಿಂದ ಹಲವು ಜನರು ಅನಾರೋಗ್ಯಕ್ಕೆ ಒಳಗಾದರೆ, ಉಳಿದ ಜನರು ನಕಲಿ ವ್ಯಾಕ್ಸಿನ್ ಯಾವ ಪರಿಣಾಮ ಬೀರಲಿದೆ ಎಂದು ಹೆದರಿದ್ದಾರೆ. ಆದರೆ, ಕೆಲ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನಕಲಿ ವ್ಯಾಕ್ಸಿನ್ ನಿಂದ ಪಾರಾಗಬಹುದು.

2. ಒಂದು ವೇಳೆ ಯಾವುದೇ ಒಂದು ಸೊಸೈಟಿ ಅಥವಾ ಕಾಲೋನಿ ತಮ್ಮ ಪ್ರದೇಶದಲ್ಲಿ ಖಾಸಗಿ ವ್ಯಾಕ್ಸಿನೆಶನ್ ಕ್ಯಾಂಪ್ ಆಯೋಜಿಸಲು ಚಿಂತನೆ ನಡೆಸುತ್ತಿದ್ದರೆ, ಮೊದಲು ಅವರು ಈ ಕುರಿತು ರೆಸಿಡೆಂಟ್ ವೆಲ್ಫೈರ್ ಅಸೋಸಿಯೇಷನ್, ಸ್ಥಳೀಯ ಅಧಿಕಾರಿಗಳು ಸೇರಿದಂತೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಬೇಕು. ಅವರ ಅನುಮತಿ ಇಲ್ಲದೆ ಮುಂದಕ್ಕೆ ಹೋಗುವ ಹಾಗಿಲ್ಲ. ಇದರಿಂದ ಎಲ್ಲಾ ರೀತಿಯ ತನಿಖೆ ನಡೆಯಲಿದೆ.

3. RWA ಅಥವಾ ಕಾರ್ಪೋರೆಟ್ ಕಂಪನಿಗಳು ಖುದ್ದಾಗಿ ಮುಂದಕ್ಕೆ ಬಂದು ಖಾಸಗಿ ಆಸ್ಪತ್ರೆಗಳ ಜೊತೆಗೆ ಒಪ್ಪಂದ ಮಾಡಿಕೊಂಡು ವ್ಯಾಕ್ಸಿನೆಶನ್ ಕ್ಯಾಂಪ್ ಆಯೋಜಿಸಬಹುದು. ಇದರಿಂದ ಯಾವುದೇ ಒಂದು ನಕಲಿ ತಂಡ ನಕಲಿ ವ್ಯಾಕ್ಸಿನೆಶನ್ ನಡೆಸುತ್ತಿದ್ದರೆ, ಖಾಸಗಿ ಆಸ್ಪತ್ರೆಗಳ ಮೂಲಕವೇ ಅದು ತಿಳಿಯಲಿದೆ.

4. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಯಸುವವರು ಕೊವಿನ್ ಆಪ್ ಅಥವಾ ಪೋರ್ಟಲ್ ಭೇಟಿ ನೀಡಿ ತಮ್ಮ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅಷ್ಟೇ ಅಲ್ಲ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ತಕ್ಷಣವೇ ಕೇಂದ್ರದಿಂದ ವ್ಯಾಕ್ಸಿನ್ ಹಾಕಿಸಿಕೊಂಡಿರುವ ಕುರಿತು ಸರ್ಟಿಫಿಕೆಟ್ ಪಡೆದುಕೊಳ್ಳಬೇಕು. ಸರ್ಟಿಫಿಕೇಟ್ ನೀಡಲು ನಿರಾಕರಿಸುವ ಅಥವಾ ಮೀನಾಮೇಷ ಎಣಿಸುವ ಕೇಂದ್ರಗಳು ನಕಲಿ ಕೇಂದ್ರಗಳಾಗಿರುವ ಸಾಧ್ಯತೆ ಇದೆ. ಅಂದರೆ, ನೀವು ಹಾಕಿಸಿಕೊಂಡಿರುವ ವ್ಯಾಕ್ಸಿನ್ ಫೇಕ್ ಆಗಿರುವ ಸಾಧ್ಯತೆ ಇದೆ.

5. ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಹಲವರಿಗೆ ಜ್ವರ, ಮೈಕೈ ನೋವು, ತಲೆನೋವು ಸಮಸ್ಯೆ ಬರದೆ ಇರಬಹುದು. ಆದರೆ ಬಹುತೇಕ ಜನರು ಒಂದೆರಡು ದಿನ ತೊಂದರೆಗಳನ್ನು ಅನುಭವಿಸುತ್ತಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಇಂತಹ ಲಕ್ಷಣಗಳ ಕುರಿತು ಜಾಗ್ರತೆವಹಿಸಿ ಹಾಗೂ ನಿಮ್ಮೊಂದಿಗೆ ಬಂದ ಇತರ ಜನರಿಗೂ ಕೂಡ ಈ ಕುರಿತು ವಿಚಾರಿಸಿ. ಒಂದು ವೇಳೆ ಒಂದೇ ವ್ಯಾಕ್ಸಿನೆಶನ್ ಸೆಂಟರ್ ನಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ಯಾವುದೇ ಪೋಸ್ಟ್ ಕೊವಿಡ್ ಲಕ್ಷಣಗಳು ಕಂಡು ಬರದೆ ಹೋದಲ್ಲಿ ವ್ಯಾಕ್ಸಿನ್ ಸೆಂಟರ್ ನಕಲಿಯಾಗಿರುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶಂಕಿತ ವ್ಯಾಕ್ಸಿನೆಶನ್ ಸೆಂಟರ್ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link