ದೀಪಾವಳಿ ಹೊತ್ತಲೇ ಕುಸಿದ ಚಿನ್ನದ ಬೆಲೆ! ಬಂಗಾರದ ಖರೀದಿಗೆ ಇದೇ ಸರಿಯಾದ ಸಮಯ
ಸಾಮಾನ್ಯವಾಗಿ ಹಬ್ಬ ಸಮೀಪಿಸುತ್ತಿದ್ದಂತೆಯೇ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತದೆ. ಆದರೆ ಈ ಬಾರಿ ದೀಪಾವಳಿ ಹೊತ್ತಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ಕಳೆದ ವಾರ, ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್ ಮಾರುಕಟ್ಟೆ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು. ಆದರೆ ಇದೀಗ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ವಾಯಿದಾ ಬಜಾರ್ ನಲ್ಲಿ ಚಿನ್ನದ ಬೆಲೆ ಕುಸಿದಿದೆ. ಫ್ಯೂಚರ್ಸ್ ಬಜಾರ್ ಆಫ್ ಇಂಡಿಯಾ (MCX) ನಲ್ಲಿ ಚಿನ್ನದ ಬೆಲೆಯಲ್ಲಿ 317 ರಷ್ಟು ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಬಂಗಾರದ ಬೆಲೆ 78,215 ರೂಪಾಯಿ ಆಗಿದೆ.
ಇತ್ತೀಚಿನ ಚಿನ್ನದ ಬೆಲೆ ನೋಡುವುದಾದರೆ 24 ಕ್ಯಾರೆಟ್ ಚಿನ್ನದ ಬೆಲೆ ಸುಮಾರು 80,300 ರೂ (ಜಿಎಸ್‌ಟಿಯೊಂದಿಗೆ). 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 73,400 ರೂ. ಆಗಿದೆ.
ಬೆಳ್ಳಿ ಕೂಡಾ ಕೆ.ಜಿಗೆ 97,900 ರೂ.ಆಗಿದೆ.
ನಿಮ್ಮ ನಗರಕ್ಕೆ ಅನುಸಾರವಾಗಿ ಚಿನ್ನದ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಚಿನ್ನವನ್ನು ಖರೀದಿಸುವಾಗ, ಅದರ ಶುದ್ಧತೆಯನ್ನು ಪರೀಕ್ಷಿಸಲು ಹಾಲ್‌ಮಾರ್ಕಿಂಗ್ ಅನ್ನು ಪರೀಕ್ಷಿಸುವುದು ಅಗತ್ಯ.