ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !

Thu, 12 Sep 2024-11:13 am,

ಇದರಲ್ಲಿ ಹಲ್ಲಿ ನೋಡುವುದರಿಂದ ಏನು ಫಲ, ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಏನು ಫಲ ಎಂಬಿತ್ಯಾದಿ ಮಾಹಿತಿಯನ್ನು ವಿವರಿಸಲಾಗಿದೆ. 

ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬಿದ್ದರೆ ಅಪಾರ ಸಂಪತ್ತು ಕೈಗೂಡುತ್ತದೆ ಎಂದು ಹೇಳಲಾಗುತ್ತದೆ. ಹಲ್ಲಿ ಬೀಳುವುದು ಮರಣದಂತಹ ಕೆಟ್ಟ ಸುದ್ದಿ ಕೇಳುವ ಬಗ್ಗೆಯೂ ಸೂಚನೆ ನೀಡುತ್ತದೆ. 

ಶಕುನ ಶಾಸ್ತ್ರದ ಪ್ರಕಾರ, ಹೊರಗಡೆ ಹೋಗುವಾಗ ಹಲ್ಲಿಗಳು ಜಗಳವಾಡುವುದನ್ನು ನೋಡಿದರೆ ಕೆಲಸದಲ್ಲಿ ಅಡಚಣೆ ಉಂಟಾಗುತ್ತದೆ ಎಂದರ್ಥ. 

ಯಾವುದೇ ಸಮಯದಲ್ಲಿ ನೀವು ಆಹಾರ ಸೇವಿಸುವಾಗ ಹಲ್ಲಿಯ ಲೊಚಗುಟ್ಟುವ ಧ್ವನಿ ಕೇಳಿದರೆ ಗುಡ್ ನ್ಯೂಸ್ ಸಿಗಲಿದೆ ಎಂದು ಸೂಚಿಸುತ್ತದೆ.

ಹಣೆಯ ಮೇಲೆ ಹಲ್ಲಿ ಬೀಳುವುದು ಶೀಘ್ರದಲ್ಲೇ ಆಸ್ತಿ ಸಂಬಂಧಿತ ವ್ಯಾಜ್ಯಗಳು ಬಗೆಹರಿಯಲಿವೆ ಎಂಬುದರ ಸಂಕೇತವಾಗಿದೆ. 

ಕೂದಲಿನ ಮೇಲೆ ಹಲ್ಲಿ ಬೀಳುವುದು ನಿಮ್ಮ ಆತ್ಮೀಯರ ಸಾವಿನ ಸುದ್ದಿಯ ಸೂಚನೆ ಎನ್ನಲಾಗುತ್ತದೆ. 

ಮೂಗಿನ ಮೇಲೆ ಹಲ್ಲಿ ಬಿದ್ದರೆ ನಿಮ್ಮ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಹಿಡಿದ ಕೆಲಸ ಕೈಗೂಡಲಿದೆ ಎಂದರ್ಥ. 

ಶಕುನ ಶಾಸ್ತ್ರದ ಪ್ರಕಾರ, ಬಲಗೈ ಮೇಲೆ ಹಲ್ಲಿ ಬಿದ್ದರೆ ಆಕಸ್ಮಿಕ ಧನಲಾಭವಾಗಲಿದೆ ಎಂಬ ಸೂಚನೆ. 

ಎಡಗೈ ಮೇಲೆ ಹಲ್ಲಿ ಬಿದ್ದರೆ ಆಸ್ತಿ, ಧನ ನಷ್ಟದ ಸೂಚನೆಯಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link