ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಕಿಚ್ಚ ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾಗಿದ್ದು ಇವರಿಂದಲೇ !
ಕಿಚ್ಚ ಸುದೀಪ್ ಮತ್ತು ಪ್ರಿಯಾ ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ. ಅಕ್ಟೋಬರ್ 18, 2001 ರಂದು ಸತಿಪತಿಗಳಾದ ಇವರು ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ಪವರ್ ಕಪಲ್ ಎಂದರೆ ತಪ್ಪಲ್ಲ.
ಒಂದು ಕಾಲದಲ್ಲಿ ಈ ದಂಪತಿಯ ವೈವಾಹಿಕ ಬದುಕಿನಲ್ಲಿಯೂ ಬಿರುಕು ಮೂಡಿತ್ತು. ಸುದೀಪ್ ಮತ್ತು ಪ್ರಿಯಾ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಕೂಡಾ. ಇದಕ್ಕೂ ಮೊದಲು ಇಬ್ಬರೂ ಸುಮಾರು ೪ ವರ್ಷಗಳವರೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರಂತೆ.
ಬೇರೆಯಾಗಿ ವಾಸಿಸುತ್ತಿದ್ದರೂ ಪ್ರಿಯಾ ಮತ್ತು ಸುದೀಪ್ ಆ ಕಾಲದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.ಹಾಗಾಗಿ ಇವರಿಬ್ಬರ ಮನಸ್ತಾಪದ ಬಗ್ಗೆ ಹೊರ ಜಗತ್ತಿಗೆ ತಿಳಿದಿರಲಿಲ್ಲ.
ಮತ್ತೊಂದು ಮುಖ್ಯ ವಿಚಾರ ಎಂದರೆ ಇವರಿಬ್ಬರು ಬೇರೆಯಾಗಲು ನಿರ್ಧರಿಸಿದ ಬಳಿಕವೂ ಪರಸ್ಪರರ ಬಗ್ಗೆ ಒಂದೇ ಒಂದು ಕೆಟ್ಟ ಮಾತನ್ನು ಆಡಿರಲಿಲ್ಲ.ಬಹಳಷ್ಟು ಗೌರವದಿಂದಲೇ ನಡೆದುಕೊಂಡಿದ್ದರು.ಮಗಳು ಸಾನ್ವಿಯ ಶಿಸ್ತುಬದ್ದ ಜೀವನದ ಹಿಂದಿರುವುದು ತಾಯಿ ಪ್ರಿಯಾ ಶ್ರಮ ಎನ್ನುವುದನ್ನು ಕಾರ್ಯಕ್ರಾವೊಂದರಲ್ಲಿ ಇದೇ ಸಂದರ್ಭದಲ್ಲಿ ಕಿಚ್ಚ ಹೇಳಿದ್ದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ, ಇಬ್ಬರೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲವಂತೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವರ್ಷಗಳ ನಂತರ ಮತ್ತೆ ಇವರಿಬ್ಬರು ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶವನ್ನು ನೀಡಲು ನಿರ್ಧರಿಸಿದ್ದರು.
ಇವರ ಈ ನಿರ್ಧಾರದ ಹಿಂದಿನ ಕಾರಣ ಅವರಿಬ್ಬರ ಮುದ್ದು ಮಗಳು ಸಾನ್ವಿ. ಮಗಳಿಗಾಗಿ ಎಲ್ಲಾ ಮನಸ್ತಾಪಗಳನ್ನು ಮರೆತು ಮತ್ತೆ ಒಂದಾಗಲು ಈ ಜೋಡಿ ನಿರ್ಧರಿಸಿತು.
ಸುದೀಪ್ ಮತ್ತು ಪ್ರಿಯಾ ಯಾವಾಗಲೂ ಪರಸ್ಪರರ ಭಾವನೆಗಳನ್ನು ಮತ್ತು ವೈಯಕ್ತಿಕ ಜೀವನವನ್ನು ಗೌರವಿಸುತ್ತಾರೆ. ಇವರಿಬ್ಬರಿಗೂ ಅವರ ಕುಟುಂಬವೇ ಸರ್ವಸ್ವ.