ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?
ಸಿಲ್ಕ್ ಸ್ಮಿತಾ 1980 ರ ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಐಟಂ ಡಾನ್ಸ್ ಮೂಲಕವೇ ಫೇಮಸ್ ಆಗಿದ್ದರು.
ಸಿಲ್ಕ್ ಸ್ಮಿತಾ ನಿರ್ಮಾಪಕರಿಗೆ ಸದಾ ಕಾಲ ಹಾಟ್ ಫೆವರೇಟ್ ನಟಿಯಾಗಿದ್ದರು. ಕೆಲಸದಲ್ಲಿನ ಅವರ ನಿಷ್ಠೆಯೇ ಇದಕ್ಕೆ ಕಾರಣವಾಗಿತ್ತು.
ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ರೆ ಸಾಕು ಆ ಚಿತ್ರ ಸೂಪರ್ ಹಿಟ್ ಆಗುವ ಕಾಲವಿತ್ತು.
ಸ್ಮಿತಾಳ ಮನಸ್ಸು ಸದಾ ಸ್ನೇಹಕ್ಕೆ ಹಾತೊರೆಯುತ್ತಿತ್ತು. ಇದನ್ನೇ ಅನೇಕರು ಮಿಸ್ ಯೂಸ್ ಮಾಡಿಕೊಂಡಿದ್ದೂ ಇದೆ.
ಸ್ಮಿತಾಳ ಸ್ನೇಹ ಮಾಡಿದ ಖ್ಯಾತ ನಟರೊಬ್ಬರು ಗೆಳೆತನದ ಗುರುತಿಗಾಗಿ ಅವಳ ಮೈ ಮೇಲೆ ಸಿಗರೇಟ್ ನಿಂದ ಸುಡುತ್ತಿದ್ದರು ಎಂದು ಹೇಳಲಾಗುತ್ತೆ. ಇಂಥದ್ದೊಂದು ಚಿತ್ರಹಿಂಸೆಗೆ ಒಳಗಾಗಿದ್ದರು ಈ ಚೆಂದುಳ್ಳಿ ಚೆಲುವೆ.
ಸಿಲ್ಕ್ ಸ್ಮಿತಾ ಕಾಲ ಕ್ರಮೇಣ ಅವಕಾಶ ಕಳೆದುಕೊಂಡರು. ಬಳಿಕ ಸಿನಿಮಾ ನಿರ್ಮಿಸಿದರೂ ಅದು ಕೂಡ ಕೈ ಹಿಡಿಯಲಿಲ್ಲ.
ಯಶಸ್ಸಿನ ಶಿಖರವೇರದ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕಿಗೆ ಅಂತ್ಯ ಹಾಡಿದರು.