ವಿವಾಹಿತನ ಸಂಬಂಧ ಮಾಡಿ ಮಕ್ಕಳೇ ಬೇಡವೆಂದ ಈ ಖ್ಯಾತ ನಟಿ.. 44 ನೇ ವಯಸ್ಸಲ್ಲಿ ಮದುವೆಯಾದ `ಅಣ್ಣಯ್ಯ`ನ ಅಮ್ಮ!
ನಟಿ ಅರುಣಾ ಇರಾನಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ಸ್ಟಾರ್ ಹೀರೋಯಿನ್.
ನಟಿ ಅರುಣಾ ಇರಾನಿ ಹೆಚ್ಚಾಗಿ ವಿಲನ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಕನ್ನಡದ ಅಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್ ಅವರ ತಾಯಿಯ ಪಾತ್ರದ ಮೂಲಕ ಸಿನಿಪ್ರಿಯರ ಮನಗೆದ್ದಿದ್ದಾರೆ.
ನಟಿ ಅರುಣಾ ಇರಾನಿ 44 ನೇ ವಯಸ್ಸಿನಲ್ಲಿ ವಿವಾಹಿತ ನಿರ್ದೇಶಕ ಕುಕು ಕೊಹ್ಲಿ ಅವರನ್ನು ಪ್ರೀತಿಸಿ ಮದುವೆಯಾದರು.
ವಿವಾಹಿತನೊಂದಿಗೆ ಮದುವೆಯಾದ ಬಳಿಕ ನಾನು ಆತನ ಸಂಸಾರ ಹಾಳು ಮಾಡಬಾರದೆಂಬ ಮನಸ್ಥಿತಿಗೆ ಬಂದರು.
ಇದೇ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳದಿರಲು ನಿರ್ಧರಿಸಿದರಂತೆ. ಈ ಬಗ್ಗೆ ಖುದ್ದು ನಟಿ ಅರುಣಾ ಇರಾನಿಯೇ ಹೇಳಿದ್ದಾರೆ ಎನ್ನಲಾಗಿದೆ.