ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ 4ನೇ ಮದುವೆಯಾದ ಖ್ಯಾತ ನಟಿ !
ಮೂರು ಮಕ್ಕಳಿದ್ದರೂ 43ನೇ ವಯಸ್ಸಿಗೆ ಈ ಖ್ಯಾತ ನಟಿ 4ನೇ ಮದುವೆಯಾಗಿದ್ದಾರೆ. ನೆಟ್ಟಿಜನ್ಸ್ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ವನಿತಾ ವಿಜಯಕುಮಾರ್ ತಮಿಳಿನ ಪ್ರಸಿದ್ಧ ನಟಿ. ಇತ್ತೀಚೆಗೆ ನಾಲ್ಕನೇ ಮದುವೆ ಆಗಿದ್ದಾರೆ. ಆಕೆಗೆ ಈಗ 43 ವರ್ಷ ವಯಸ್ಸಾಗಿದ್ದು, ಮೂರು ಮಕ್ಕಳ ತಾಯಿಯೂ ಹೌದು.
ತಮಿಳಿನ ಖ್ಯಾತ ನಟಿ ವನಿತಾ ವಿಜಯಕುಮಾರ್ ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ನಾಲ್ಕನೇ ಬಾರಿಗೆ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.
ವನಿತಾ ವಿಜಯಕುಮಾರ್ ಅವರು ಖ್ಯಾತ ನೃತ್ಯ ನಿರ್ದೇಶಕ ರಾಬರ್ಟ್ ಅವರೊಂದಿಗೆ 4 ನೇ ಮದುವೆ ಆಗಿದ್ದಾರೆ.
ತಮಿಳಿನ ಹಿರಿಯ ನಟ ವಿಜಯಕುಮಾರ್ ಮತ್ತು ಎರಡನೇ ಪತ್ನಿ ತಮಿಳು ನಟಿ ಮಂಜುಳಾ ಅವರ ಪುತ್ರಿ ವನಿತಾ. ಈ ಹಿಂದೆ ವನಿತಾ ಅವರಿಗೆ ಮೂರು ಮದುವೆಯಾಗಿದೆ.
2000 ರಲ್ಲಿ ನಟ ಆಕಾಶ್ ಎಂಬವರನ್ನು ವನಿತಾ ಮದುವೆ ಆಗಿದ್ದರು. ಬಳಿಕ 2005 ರಲ್ಲಿ ವಿಚ್ಛೇದನ ನೀಡಿದರು.
2007ರಲ್ಲಿ, ಉದ್ಯಮಿ ಆನಂದ್ ಜಯ್ ರಾಜನ್ ಜೊತೆ ವಿವಾಹವಾದರು. ಆ ಬಳಿಕ ಛಾಯಾಗ್ರಾಹಕ ಪೀಟರ್ ಪಾಲ್ ಅವರನ್ನು ಮೂರನೇ ಸಲ ಮದುವೆಯಾಗಿದ್ದರು.
ವನಿತಾ 2020ರಲ್ಲಿ ಪೀಟರ್ ಪಾಲ್ ಜೊತೆ ಡಿವೋರ್ಸ್ ಪಡೆದರು. ಇದೀಗ ರಾಬರ್ಟ್ ಜೊತೆ 43 ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿ ಮದುವೆಯಾಗಿದ್ದು, ಆಶ್ಚರ್ಯ ತಂದಿದೆ.