ಇಂಡಸ್ಟ್ರಿಯನ್ನೇ ಆಳಿದ್ದ ಸ್ಟಾರ್‌ ಹಿರೋಯಿನ್..‌ ವಿವಾಹಿತ ನಟನೊಂದಿಗಿನ ಅಫೇರ್‌ನಿಂದ ಸಿನಿರಂಗಕ್ಕೆ ಗುಡ್‌ ಬೈ ಹೇಳಿದ ನಟಿ ಈಕೆ!!

Thu, 15 Aug 2024-2:27 pm,

ಇಂದು ನಾವು ಹೇಳಲು ಹೊರಟಿರುವ ನಟಿ ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ ವಿವಾಹಿತ ನಾಯಕನ ಜತೆ ಸಂಬಂಧ ಹೊಂದಿದ್ದಳು. ಇದರಿಂದಾಗಿ ಅವರ ವೃತ್ತಿಜೀವನವೇ ಸರ್ವನಾಶವಾಯಿತು ಎಂದರೇ ಅತಿಶಯೋಕ್ತಿಯಲ್ಲ.. ಸುಂದರ ನಟಿ ಈಗ ಸಿನಿಮಾಗಳಿಂದ ಸಂಪೂರ್ಣ ದೂರವಾಗಿದ್ದಾರೆ.   

ಚಿತ್ರರಂಗದಲ್ಲಿ ನಾಯಕಿಯರಾಗಿ ಮಿಂಚಲು ಹಲವು ನಟಿಯರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅನೇಕರು ತಮ್ಮ ವೃತ್ತಿಜೀವನವನ್ನು ಸಣ್ಣ ಪಾತ್ರಗಳೊಂದಿಗೆ ಪ್ರಾರಂಭಿಸಿ.. ಈಗ ದೊಡ್ಡ ನಾಯಕಿಯಾಗಿದ್ದಾರೆ..ಮತ್ತು ತಮ್ಮ ಅಭಿನಯದಿಂದ ಸ್ಟಾರ್ ಸ್ಥಾನಮಾನವನ್ನೂ ಗಳಿಸಿದ್ದಾರೆ...  

ಇನ್ನು ಕೆಲವರು ಹತ್ತಾರು ಆಡಿಷನ್ ಕೊಟ್ಟು ಕೊನೆಗೆ ಹೀರೋಯಿನ್ ಆಗಿದ್ದಾರೆ... ಇವರೊಂದಿಗೆ ಬೇರೆ ಭಾಷೆಯಿಂದ ಬಂದು ಅದಮ್ಯ ಪ್ರತಿಭೆಯಗಾಇ ಮಿಂಚುತ್ತಿರುವವರೂ ಇದ್ದಾರೆ. ಆದರೆ ಒಂದೊಮ್ಮೆ ನಾಯಕಿಯಾಗಿ ಕ್ರೇಜ್ ಬಂದರೆ ಆ ಹೆಸರನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕು.. ಇಲ್ಲವಾದಲ್ಲಿ ತಮ್ಮ ಕೈಯಿಂದಲೇ ಸಿನಿಮಾ ಕೆರಿಯರ್ ಹಾಳಾಗುವುದುಂತೂ ಖಂಡಿತ.. ಇಂತಹವರಲ್ಲಿ ಮೇಲಿನ ನಾಯಕಿಯೂ ಒಬ್ಬರು.   

ಆ ಬೇರೆ ಯಾರೂ ಅಲ್ಲ.. ಕನ್ನಡದಲ್ಲಿ ದರ್ಶನ್‌ ಅಭಿನಯದ ಫ್ರಿನ್ಸ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಒಂದೊಳ್ಳೆ ಕ್ರೇಜ್‌ ಗಿಟ್ಟಿಸಿಕೊಂಡಿದ್ದ ನಿಕಿತಾ ತುಕ್ರಾಲ್... ನಟಿ ಕನ್ನಡ ಮಾತ್ರಲ್ಲದೇ ಟಾಲಿವುಡ್‌ನಲ್ಲಿಯೂ ಮಿಂಚಿದ್ದರು..   

ನಟಿ ನಿಕಿತಾ ಕನ್ನಡ ಇಂಡಸ್ಟ್ರಿಯಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವಾಗಲೇ ನಟ ದರ್ಶನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದು, ಇವರಿಬ್ಬರ ವಿಚಾರ ದರ್ಶನ್ ಪತ್ನಿಗೆ ಗೊತ್ತಾಗಿ ದರ್ಶನ್ ವಿರುದ್ಧ ಪೊಲೀಸ್ ದೂರು ನೀಡಿದ್ದರು.   

ದರ್ಶನ್ ಅವರನ್ನು ಈ ವಿವಚಾರವಾಗಿ ಬಂಧಿಸಲಾಗಿತ್ತು.  ಆ ಕಾರಣಕ್ಕೆ ಕನ್ನಡ ಇಂಡಸ್ಟ್ರಿ ನಿಖಿತಾ ಅವರನ್ನು ಮೂರು ವರ್ಷಗಳ ಕಾಲ ಬ್ಯಾನ್ ಮಾಡಿತು.. ಆದರೆ ನಿಷೇಧ ತೆರವಾದ ನಂತರ ನಿಕಿತಾಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2017 ರಲ್ಲಿ, ನಿಕಿತಾ ಉದ್ಯಮಿ ಗಗನ್‌ದೀಪ್ ಸಿಂಗ್ ಮಾಗೊ ಅವರನ್ನು ವಿವಾಹವಾದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link