ನಟಿ ಪ್ರೇಮಾ ಜೊತೆ ಲವ್ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಚಂದನವನದ ಚೆಲುವೆ!
ನಟ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಪ್ರೀತಿ ಇದೆ ಎಂಬ ವದಂತಿ ʻAʼ ಸಿನಿಮಾ ತೆರೆಗೆ ಬರುವ ಸಂದರ್ಭದಲ್ಲಿ ಹಬ್ಬಿತ್ತು. ಈ ಬಗ್ಗೆ ನಟಿ ಪ್ರೇಮಾ ಮಾತನಾಡಿದ್ದಾರೆ.
ಉಪೇಂದ್ರ ರಚಿಸಿದ 'ಏನಿಲ್ಲಾ ಏನಿಲ್ಲಾ' ಹಾಡು 25 ವರ್ಷಗಳ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ʻಕರಿಮಣಿ ಮಾಲೀಕʼನ ಹಾವಳಿ ಶುರುವಾಗಿತ್ತು. ಈಗ ಈ ಹಾಡಿನ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ ಮಾತನಾಡಿದ್ದಾರೆ.
ಈ ಸಂದರ್ಶನದಲ್ಲಿ ಪ್ರೇಮಾ ಮತ್ತು ಉಪೇಂದ್ರ ಲವ್ ಮಾಡ್ತಿದ್ರಾ ಎಂದು ನೇರವಾಗಿಯೇ ಪ್ರೇಮಾ ಅವರನ್ನು ಪ್ರಶ್ನಿಸಲಾಗಿದೆ. ಉಪೇಂದ್ರ, ಪ್ರೇಮಾ ಲವ್ ಇತ್ತು ಎನ್ನುವ ಸುದ್ದಿ ಆಗಿದ್ದಕ್ಕೆ ಹಾಡು ಬರೆದಿದ್ದಾ ಎಂದು ಕೇಳಿದ್ದಾರೆ.
ʻAʼ ಸಿನಿಮಾ ಮಾಡಿದ ಉಪೇಂದ್ರ ಅವರೇ ʻಕರಿಮಣಿ ಮಾಲೀಕʼ ಎಂದಿದ್ದಾರೆ ನಟಿ ಪ್ರೇಮಾ. ಆ ಸಿನಿಮಾದಲ್ಲಿ ಹಾಡು ಸ್ಲೋ ಆಗಿ ಇದೆ. ಈಗ ಅದನ್ನು ರೀಮಿಕ್ಸ್ ಮಾಡಿದ್ದಾರೆ ಎಂದಿದ್ದಾರೆ.
ಉಪೇಂದ್ರ ಅವರ ಮನಸ್ಸಿನಲ್ಲಿ ಏನಿತ್ತು ನನಗೆ ಈಗಲೂ ಗೊತ್ತಿಲ್ಲ. ನಮ್ಮಿಬ್ಬರಿಗೂ ಕೆಲಸದ ಹಸಿವಿತ್ತು. ಲವ್ ಮಾಡುವ ಆಲೋಚನೆಯೇ ಇರಲಿಲ್ಲ. ನನಗೆ ಉಪೇಂದ್ರ ಅವರ ಹಾರ್ಡ್‌ವರ್ಕ್ ಇಷ್ಟ ಎಂದಿದ್ದಾರೆ.
ಇಬ್ಬರ ನಡುವೆ ಪ್ರೀತಿ ಇತ್ತಾ? ಎಂಬ ನೇರ ಪ್ರಶ್ನೆಗೆ ನಟಿ ಪ್ರೇಮಾ 'ಇಲ್ಲ', ನಾವಿಬ್ಬರು ಒಳ್ಳೆ ಫ್ರೆಂಡ್ಸ್, ನಮ್ಮ ನಡುವೆ ಅಂಥದ್ದೇನೂ ಇರಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.