Anchor Anushree Marriage: ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು ಗೊತ್ತೇ!

Tue, 30 Jul 2024-10:18 am,

ನಟಿ ಅನುಶ್ರೀ ಪಟ ಪಟ ಅರಳು ಹುರಿದಂತೆ ಮಾತನಾಡಿ ಜನರ ಮನಗೆದ್ದಿದ್ದಾರೆ. ಇದೀಗ ಅನುಶ್ರೀ ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂಬ ವಿಚಾರ ವೈರಲ್‌ ಆಗಿದೆ.   

ಅನುಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಸೂಕ್ತ ವರನನ್ನು ನೀವೇ ಆರಿಸಿ ಎಂದಿದ್ದರು.   

ಅಲ್ಲದೇ ಅಮ್ಮ ಒಪ್ಪುವ ಹುಡುಗನನ್ನು ಮದುವೆ ಆಗ್ತೀನಿ ಎಂದು ಸಹ ಹೇಳಿದ್ದಾರೆ ಎಂದು ಹೇಳಲಾಗಿತ್ತು.  

ಇದೀಗ ಮದುವೆಗೆ ಸಜ್ಜಾಗಿರುವ ಅನುಶ್ರೀ ರಿಯಲ್‌ ವಯಸ್ಸಿನ ಬಗ್ಗೆ ಅನೇಕರಲ್ಲಿ ಕುತೂಹಲ ಮೂಡಿದೆ. ಅನುಶ್ರೀ ಯಾವ ವಯಸ್ಸಿಗೆ ಮದುವೆ ಆಗಲು ಒಪ್ಪಿದರು ಎಂಬ ಕುತೂಹಲ ಜನರನ್ನು ಕಾಡುತ್ತಿದೆ.  

ಈ ಹಿಂದೆ ಅನೇಕ ಬಾರಿ ಅನುಶ್ರೀ ಮದುವೆಯಾದಂತೆ ಬಿಂಬಿಸುವ ಫೋಟೋಗಳು ಸೋಷುಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಆದರೆ ಅದೆಲ್ಲವೂ ಫೇಕ್‌ ಎಂದು ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಶ್ರೀ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಒಬ್ಬರಾಗಿದ್ದಾರೆ.  

ಖ್ಯಾತ ನಿರೂಪಕಿ ಅನುಶ್ರೀ 25 ಜನವರಿ 1988 ರಲ್ಲಿ ಜನಿಸಿದರು ಎನ್ನಲಾಗುತ್ತದೆ. ಆ ಪ್ರಕಾರ ಅನುಶ್ರೀ ನಿಜವಾದ ವಯಸ್ಸು 36 ವರ್ಷ.

36 ನೇ ವಯಸ್ಸಿನಲ್ಲಿ ಮದುವೆಗೆ ನಿರೂಪಕಿ ಅನುಶ್ರೀ ಒಪ್ಪಿ ಸೂಚಿಸಿದ್ದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link