Anchor Aparna: ನಿರೂಪಕಿ ಅಪರ್ಣಾ ಅವರ ತಂದೆ ಯಾರು ಗೊತ್ತಾ? ಇವರೂ ತುಂಬಾ ಫೇಮಸ್!
ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ.. ಅಲ್ಲದೇ ತಮಗೆ ಈ ಕಾಯಿಲೆ ಇದೆ ಎಂದು ಹೇಳಿಕೊಂಡಿರಲಿಲ್ಲ.. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿರೂಪಕಿ ಜುಲೈ 11ರ ರಾತ್ರಿ 9;30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ..
ಮೂಲಕತಃ ಚಿಕ್ಕಮಂಗಳೂರಿನ ಪಂಚನ ಹಳ್ಳಿಯವರಾದ ಅಪರ್ಣಾ ಅವರ ತಂದೆ ಕೆ. ಎಸ್. ನಾರಾಯಣಸ್ವಾಮಿ.. ಇವರು ಸಿನಿಮಾ ಪತ್ರಕರ್ತರಾಗಿದ್ದರು..
ಇನ್ನು ಶಾಲಾ ದಿನಗಳಲ್ಲಿಯೇ ನಿರೂಪಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಪರ್ಣಾ ಇಂದು ಸ್ಯಾಂಡಲ್‌ವುಡ್ ಲೋಕದಲ್ಲಿ ಮೈಲಿಗಲ್ಲಾಗಿದ್ದಾರೆ..
ಇವರ ಪತಿ ನಾಗರಾಜ್ ವಸ್ತಾರೆ ಅವರೂ ಸಹ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ.. ಆದರೆ ಈ ದಂಪತಿಗೆ ಮಕ್ಕಳಾಗಿಲ್ಲ ಅನ್ನೋ ಕೊರಗಿತ್ತು..
ನಿರೂಪಣಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ ಅಪರ್ಣಾ ವರಿಗೆ ನಿರೂಪಣೆ ಕುರಿತು ಶಾಲೆ ಆರಂಭಿಸುವ ಆಸೆ ಇತ್ತು.. ಆದರೆ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ..
ಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ ಕಲಾವಿದೆ ಅಪರ್ಣಾ ಅವರು ಕಿರುತೆರೆ, ಹಾಗೂ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ.