ಮೂರು ಮದುವೆಯಾದರೂ ಒಂಟಿ ಬಾಳು ನಟಿ ಜ್ಯೂಲಿ ಲಕ್ಷ್ಮೀಯದ್ದು ! ಇವರ ಬದುಕಿನ ಆ ಮೂವರು ಮತ್ತು ಇಬ್ಬರು ಮಕ್ಕಳು ಇವರೇ ನೋಡಿ !

Fri, 26 Jul 2024-11:50 am,

ನಟಿ ಜೂಲಿ ಲಕ್ಷ್ಮೀ ಕನ್ನಡದ ಹಿರಿಯ ನಟಿ. ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಕನ್ನಡ ಮಾತ್ರವಲ್ಲದೆ  ತೆಲುಗು,ತಮಿಳು,ತೆಲುಗು,ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದಾರೆ.     

ನಟನೆಯಲ್ಲಿ ಎಂಥಹ ಪಾತ್ರಕ್ಕೂ ಅದ್ಭುತವಾಗಿ ಜೀವ ತುಂಬುತ್ತಿದ್ದರು. ಇನ್ನು ಇವರ ಸಿನಿಮಾ ಎಂದರೆ ಅದು ಭಾವಾನಾತ್ಮಕವಾಗಿ ಬೆಸೆದು ಬಿಡುವಂಥದ್ದು.ಒಂದು ರೀತಿಯಲ್ಲಿ ಸಿನಿಮಾದಲ್ಲಿ ಇವರು ಕಣ್ಣೀರಿನ ರಾಣಿ. 

ಸಿನಿಮಾ ಮಾತ್ರವಲ್ಲ,ನಿಜ ಜೀವನದಲ್ಲಿಯೂ ಇವರಿಗೆ ಕಣ್ಣೀರು ತಪ್ಪಿರಲಿಲ್ಲ.      ತೆಗೆದುಕೊಂಡ ನಿರ್ಧಾರ ಇವರಿಗೆ ಸಂಸಾರ ಸುಖ ನೀಡಲೇ ಇಲ್ಲ. ಇವರು ಮೂರೂ ಮದುವೆಯಾಗಿದ್ದಾರೆ.ಆದರೆ ಮೂರೂ ಸಂಬಂಧ ಕೊನೆ ತನಕ ಉಳಿಯಲೇ ಇಲ್ಲ.  

ಸಿನಿಮಾ ರಂಗದಲ್ಲಿ ಇನ್ನೇನು ಹೆಸರು ಮಾಡುತ್ತಿದ್ದಾರೆ ಎನ್ನುವಷ್ಟರಲ್ಲಿಯೀ ತನ್ನ ತಂದೆಯ ಆಸೆಯಂತೆ ಭಾಸ್ಕ ರ್ ಎಂಬವರನ್ನು ವರಿಸುತ್ತಾರೆ.ಈ ಮದುವೆಗೆ ಒಬ್ಬಳು ಮಗಳು ಅವರೇ ಐಶ್ವರ್ಯಾ.   

ಈ ಮದುವೆ ಮುರಿದು ಬಿದ್ದ ನಂತರ ಇವರ ಬಾಳಲ್ಲಿ ಮಲಯಾಳಂನ ಖ್ಯಾತ ನಟ ಮೋಹನ್ ಅವರ ಪ್ರವೇಶವಾಗುತ್ತದೆ.ಆದರೆ  ಈ ಪ್ರೀತಿ ಕೂಡಾ ಬಹಳ ಕಾಲ ಮುಂದುವರೆಯುವುದಿಲ್ಲ.ಅಲ್ಲಿಗೆ ಎರಡನೇ ಮದುವೆ ಕೂಡಾ ಕೊನೆಯಾಗುತ್ತದೆ. 

ಇದಾದ ನಂತರ ಮೂರನೇ ಬಾರಿಗೆ ಅವರು ಮದುವೆಯಾಗುವುದು  ನಿರ್ದೇಶಕ ಶಿವ ಚಂದ್ರನ್ ಅವರನ್ನು. ಆದರೆ ಅದಾಗಲೇ ಮಗಳು ಐಶ್ವರ್ಯಾ ಮದುವೆ ವಯಸ್ಸಿಗೆ ಬಂದಿರುತ್ತಾಳೆ. ಹೀಗಾಗಿ ಈ ಮದುವೆಗೆ ಭಾರೀ ಟೀಕೆ ವ್ಯಕ್ತವಾಗುತ್ತದೆ.   

ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟಿ ಮದುವೆಯಾಗಿಯೇ ಬಿಡುತ್ತಾರೆ. ಆದರೆ ಈ ಮದುವೆ ಕೂಡಾ ನೆಮ್ಮದಿ ಜೀವನ ನೀಡುವುದಿಲ್ಲ.ಹಾಗಾಗಿ ಮೂರೂ ಮದುವೆಯಾದರೂ ಇಂದಿಗೂ ಒಂಟಿಯಾಗಿಯೇ ಜೀವನ ನಡೆಸುತ್ತಾರೆ.   

ಅಂದ  ಹಾಗೆ ಈ ಎಲ್ಲಾ ಜಂಜಾಟಗಳ ಮಧ್ಯೆಯೂ ಲಕ್ಷ್ಮೀ  ಮತ್ತೊಬ್ಬ ಹೆಣ್ಣು ಮಗಳನ್ನು ದತ್ತು ಪಡೆಯುತ್ತಾರೆ. ಅವರೇ ಸಂಯುಕ್ತಾ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link