ಕ್ರಿಕೆಟರ್‌ ಆಗಬೇಕೆಂದು ಕನಸು ಕಂಡಿದ್ದ ಈತ ಇಂದು ಸಿನಿಮಾ ಇಂಡಸ್ಟ್ರಿ ಆಳುತ್ತಿರುವ ಸ್ಟಾರ್‌ ನಟ! ಭಾರತದ ʻಈʼ ಸ್ಟಾರ್‌ ಆಟಗಾರ ಈತನ ಅಳಿಯ

Tue, 07 Jan 2025-3:20 pm,

Bollywood Actor: ಬಾಲಿವುಡ್‌ನ ಪ್ರತಿಭಾವಂತ ನಟ ಸುನೀಲ್ ಶೆಟ್ಟಿ ಬಾಲಿವುಡ್‌ನ ಅತ್ಯಂತ ಯಶಸ್ವಿ ತಾರೆಗಳಲ್ಲಿ ಒಬ್ಬರು. ತಮ್ಮ 30 ವರ್ಷಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ, ಸುನಿಲ್ ಶೆಟ್ಟಿ ಹತ್ತಾರು ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  

ಸುನೀಲ್ ಶೆಟ್ಟಿ ಆಕ್ಷನ್ ಹೀರೋ ಆಗಿ ನಟನಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ಅಷ್ಟೇ ಅಲ್ಲ ಸುನೀಲ್ ಶೆಟ್ಟಿಯ ಕಪ್ಪು ಮೈಬಣ್ಣದಿಂದಾಗಿ 90ರ ದಶಕದ ಯಾವ ನಾಯಕಿಯೂ ಅವರ ಜೊತೆ ಕೆಲಸ ಮಾಡಲು ಸಿದ್ಧರಿರಲಿಲ್ಲ.   

ಸುನೀಲ್ ಶೆಟ್ಟಿ 1992 ರಲ್ಲಿ 'ಬಲವಾನ್' ಚಿತ್ರದ ಮೂಲಕ ನಟನಾ ಜಗತ್ತಿಗೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಕೆಲಸ ಮಾಡುವುದು ನಟನಿಗೆ ಸುಲಭವಾಗಿರಲಿಲ್ಲ. ಈ ಹಿಂದೆ ಸುನೀಲ್ ಶೆಟ್ಟಿ ಅವರನ್ನು ಹಲವು ನಾಯಕಿಯರು ತಿರಸ್ಕರಿಸಿದ್ದರು.  

ಇದಾದ ನಂತರ ಸೂಪರ್ ಸ್ಟಾರ್ 'ದಿವ್ಯಾ ಭಾರತಿ'ಸುನಿಲ್‌ ಅವರೊಂದಿಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಸುನಿಲ್ ಶೆಟ್ಟಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ.     

ಒಂದು ಫೋಟೋದಿಂದಾಗಿ ಸುನೀಲ್ ಶೆಟ್ಟಿ ಅದೃಷ್ಟ ಖುಲಾಯಿಸಿತ್ತು. ಚಿತ್ರನಿರ್ಮಾಪಕ ರಾಜು ಮಾವಣಿ ಅವರು ‘ಬಲವಾನ್’ ಸಿನಿಮಾ ಮಾಡುವಾಗ ಒಂದು ದಿನ ರಾಜು ಚಿತ್ರದ ಸಾಹಸಮಯ ಕಥೆಯನ್ನು ಸುನಿಲ್‌ಗೆ ಹೇಳಿ ಅಂತಹ ಕಥೆಯ ಮೇಲೆ ಸಿನಿಮಾ ಮಾಡೋಣ ಎಂದಿದ್ದರು. ಸುನಿಲ್ ಶೆಟ್ಟಿ ಜೊತೆಗಿನ ಈ ಚಿತ್ರದ ಮೂಲಕ ದಿವ್ಯಾ ಭಾರತಿ ಕೂಡ ಚಿತ್ರರಂಗ ಪ್ರವೇಶಿಸಿದ್ದರು.   

ಮೊದಲ ಚಿತ್ರವೇ ಸುನೀಲ್‌ರನ್ನು ಆಕ್ಷನ್ ಸ್ಟಾರ್ ಆಗಿ ಮಾಡಿದ್ದರೆ, ದಿವ್ಯಾ ಅವರ ಆಕರ್ಷಕ ಸೌಂದರ್ಯ ಮತ್ತು ನಗು ಅವರನ್ನು ರಾತ್ರೋರಾತ್ರಿ ಜನಪ್ರಿಯಗೊಳಿಸಿತು. ಸುನಿಲ್ ಕಳೆದ 30 ವರ್ಷಗಳಲ್ಲಿ ಚಿತ್ರರಂಗದಲ್ಲಿ ಅನೇಕ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ ಆದರೆ ದಿವ್ಯಾ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.    

ಸುನಿಲ್ ಶೆಟ್ಟಿ ಮೊದಲಿನಿಂದಲೂ ಕ್ರಿಕೆಟಿಗನಾಗಬೇಕು ಎಂಬ ಕನಸನ್ನು ಕಂಡವರು. ಆದರೆ ವಿಧಿ ಯಾವ ದಾರಿಯ ಎಡೆಗೆ ನಮ್ಮನ್ನು ಕರೆದೊಯುತ್ತದೆ ಎಂಬುದು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಬಣ್ಣದಿಂದಾಗಿ ಹಲವು ನಾಯಕಿಯರಿಂದ ತಿರಸ್ಕರಿಸಲ್ಪಟ್ಟ ಒಬ್ಬ ವ್ಯಕ್ತಿ ಇಂದು ಸ್ಟಾರ್‌ ಆಕ್ಟರ್‌ ಅಷ್ಟೆ ಅಲ್ಲ ದೊಡ್ಡ ಉದ್ಯಮಿ ಕೂಡ. ಅಷ್ಟಕ್ಕೂ ಭಾರತ ತಂಡಟ ಸ್ಟಾರ್‌ ಆಟಗಾರ ಸುನಿಲ್‌ ಅವರ ಅಳಿಯ.    

ಒಂದು ಕಾಲದಲ್ಲಿ ಸುನಿಲ್‌ನ ತಂದೆಗೆ ಕೆಲಸವಿರಲಿಲ್ಲ , ಆದ್ದರಿಂದ ಅವರ ತಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದರು. ಅಲ್ಲಿ ಕಟ್ಟಡವೊಂದರಲ್ಲಿ ಸ್ವಚ್ಛತಾ ಕೆಲಸಗಾರನಾಗಿ ಕೆಲಸ ಆರಂಭಿಸಿದರು. ನಂತರ, ಖ್ಯಾತಿ ಗಳಿಸಿದ ನಂತರ ಸುನೀಲ್ ಶೆಟ್ಟಿ ಅದೇ ಕಟ್ಟಡವನ್ನು ಖರೀದಿಸಿದರು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link