Famous Comedian Vadivelu: ಪ್ರಸಿದ್ಧ ಹಾಸ್ಯ ಕಲಾವಿದನಿಗೆ ಬರ್ತ್ ಡೇ ಗಿಫ್ಟ್ ಆಗಿ ತಾಯಿಯ ಫೋಟೋ ಸಿಕ್ಕಾಗ...

Tue, 14 Sep 2021-7:00 am,

ವಡಿವೇಲು ಎಂದೇ ಖ್ಯಾತಿ ಪಡೆದಿರುವ ವೈಗೈ ಪುಯಲ್ ವಡಿವೇಲು ಅವರು ಸುದೀರ್ಘ ವಿರಾಮದ ನಂತರ ಪ್ರಸ್ತುತ ತಮಿಳು ಚಿತ್ರರಂಗಕ್ಕೆ ಮರು ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮೊನ್ನೆಯಷ್ಟೇ (ಸೆಪ್ಟೆಂಬರ್ 12) ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಈ ಸಂಭ್ರಮಾಚರಣೆಯ ಫೋಟೋ ವೈರಲ್ ಆಗುತ್ತಿದೆ.

ವಡಿವೇಲು (Vadivelu) ಅವರ ಈ ಹುಟ್ಟುಹಬ್ಬಕ್ಕೆ ಅವರು ಪಡೆದ ಉಡುಗೊರೆ ಒಂದು ಅವರನ್ನು ಬಹಳ ಭಾವುಕರನ್ನಾಗಿ ಮಾಡಿದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಾಯಿಗೆ ಸರಿಸಾಟಿ ಯಾವುದು ಇಲ್ಲ ಎಂಬುದನ್ನು ಮರೆಯುವಂತಿಲ್ಲ. ವಾಸ್ತವವಾಗಿ, ವಡಿವೇಲು ತಮ್ಮ ಜನ್ಮದಿನದಂದು ಅವರ ತಾಯಿಯ ವರ್ಣಚಿತ್ರವನ್ನು ಉಡುಗೊರೆಯಾಗಿ ಪಡೆದ ಕ್ಷಣ ಇದನ್ನು ನೆನಪಿಸುವಂತಿತ್ತು.

ಇದನ್ನೂ ಓದಿ- 'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'

ತನ್ನ ಹಾಸ್ಯ ಕಲೆಯ ಮೂಲಕ ಲಕ್ಷಾಂತರ ಜನರ ಮೊಗದಲ್ಲಿ ನಗು ಅರಳಿಸುವ ಕಲಾವಿದ ವಡಿವೇಲು ತಾಯಿಯ ಪೇಂಟಿಂಗ್ ಕಂಡ ಕ್ಷಣ ಭಾವುಕರಾದರು.  ವಾಸ್ತವವಾಗಿ, ಅಭಿಮಾನಿಯೊಬ್ಬರು ನೀಡಿರುವ ಈ ಪೇಂಟಿಂಗ್ ನಲ್ಲಿ ನಟ ವಡಿವೇಲು ಅವರ ತಾಯಿಯನ್ನು ಪ್ರೀತಿಯಿಂದ ತಬ್ಬಿಕೊಂಡಿರುವಂತಿದೆ.

ಇದನ್ನೂ ಓದಿ- 55ನೇ ಚಿತ್ರದಲ್ಲಿ ‘ಕ್ರಾಂತಿ’ ಮಾಡಲು ಸಜ್ಜಾದ ಚಾಲೆಂಜಿಗ್ ಸ್ಟಾರ್ ದರ್ಶನ್..!

ಸುದೀರ್ಘ ವಿರಾಮದ ನಂತರ ತಮಿಳು ಚಿತ್ರರಂಗಕ್ಕೆ ಮರು ಎಂಟ್ರಿ ನೀಡಿರುವ ವಡಿವೇಲು ತಮ್ಮ ತಾಯಿಯ ಈ ಪೇಂಟಿಂಗ್ ಕಂಡೊಡನೆ ಮಗು ತನ್ನ ತಾಯಿಯನ್ನು ಕಂಡೊಡನೆ ಅಪ್ಪಿ ಮುದ್ದಾಡುವಂತೆ ತಾಯಿಯ ಫೋಟೋಗೆ ಚುಂಬಿಸಿದರು.

(Photo Credit: ಈ ಎಲ್ಲಾ ಫೋಟೋಗಳನ್ನು ಜೀ ಹಿಂದೂಸ್ಥಾನ್ ತಮಿಳ್ ಡಿಜಿಟಲ್ ನಿಂದ ತೆಗೆದುಕೊಳ್ಳಲಾಗಿದೆ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link