ಅಪ್ಸರೆಯಂತ ನಟಿಗೆ ಮನಸೊತ್ತಿದ್ದ ನಿರ್ದೇಶಕ, ಆಕೆ ಮದುವೆಯಾದಾಗ ಗೊಳೋ ಅಂತ ಅತ್ತಿದ್ದರಂತೆ... ಈಗಲೂ ಒಂಟಿಯಾಗಿರುವ ಯಾರೀತ..!
)
ಸಿನಿಮಾ ನಟಿಯರನ್ನು ಕಂಡರೆ ಕೇವಲ ಪಡ್ಡೆ ಹುಡುಗರಿಗಷ್ಟೇ ಅಲ್ಲ ಚಿತ್ರರಂಗದಲ್ಲಿರುವವರಿಗೂ ಪ್ರೀತಿ ಹುಟ್ಟುವುದರಲ್ಲಿ ಅಚ್ಚರಿಯೇನಲ್ಲ. ಆದರೆ, ಪ್ರೀತಿ ಕೈಗೂಡದಿದ್ದಾಗ ಹೇಗಿರುತ್ತೆ... ನೆಚ್ಚಿನ ನಟಿ ಮದುವೆಯಾದಾಗ ಈ ನಿರ್ದೇಶಕನ ಸ್ಥಿತಿಯೂ ಹಾಗೇ ಇತ್ತು.
)
ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಅಪ್ಸರೆಯಂತಹ ನಟಿಯ ಮೇಲೆ ಪ್ರೇಮಾಂಕುರವಾಗಿತ್ತು.
)
ಚಿತ್ರರಂಗದಲ್ಲಿ ಆರ್‌ಜಿವಿ ಎಂತಲೇ ಖ್ಯಾತಿಯಾಗಿರುವ ರಾಮ್ ಗೋಪಾಲ್ ವರ್ಮಾಗೆ ನಟಿ ಶ್ರೀದೇವಿ ಮೇಲೆ ಲವ್ ಆಗಿತ್ತಂತೆ. ಆಕೆ ಬೋನಿ ಕಪೂರ್ ಕೈ ಹಿಡಿದಾಗ ಈತ ಗೊಳೋ ಎಂದು ಅತ್ತಿದ್ದರಂತೆ. ಈ ಬಗ್ಗೆ ತಾವೇ ಹಲವೆಡೆ ಆರ್‌ಜಿವಿ ಹೇಳಿಕೊಂಡಿದ್ದಾರೆ.
ಅಪ್ಸರೆಯಂತಿದ್ದ ನಟಿ ಈಗಾಗಲೇ ಮದುವೆಯಾಗಿ ಮಕ್ಕಳಿರುವ ಮುದುಕನನ್ನು ಮದುವೆಯಾದಳಲ್ಲ ಎಂದು ರಾಮ್ ಗೋಪಾಲ್ ವರ್ಮಾ ತುಂಬಾ ದುಃಖಿತರಾಗಿರಂತೆ. ಅಷ್ಟೇ ಅಲ್ಲ, ಮಾಧ್ಯಮ ವರದಿಗಳ ಪ್ರಕಾರ, ನಟಿ ಸಾವಿನ ಸುದ್ದಿ ಕೇಳಿದಾಗಲೂ ಇವರು ಎಲ್ಲರಿಗಿಂತ ಹೆಚ್ಚು ಆಘಾತ ಆಗಿದ್ದರು.
ಆ ದೇವರೇ ಸೃಷ್ಟಿಸಿ ಭೂಮಿಗೆ ಕಳುಹಿಸಿದ್ದ ಸ್ವರ್ಗದ ದೇವತೆ ಸೆ*ಕ್ಸಿಯೆಸ್ಟ್ ನಟಿಯನ್ನು ಬೋನಿ ಕಪೂರ್ ಸಾಮಾನ್ಯ ಗೃಹಿಣಿಯಾಗಿ ಮಾಡಿಬಿಟ್ಟರಲ್ಲ ಎಂದು ಆರ್‌ಜಿವಿ ಶ್ರೀದೇವಿ ಪತಿಯನ್ನು ಸಹ ಬೈದುಕೊಂಡಿದ್ದರಂತೆ.
ರಾಮ್ ಗೋಪಾಲ್ ವರ್ಮಾ ರತ್ನಾ ಎಂಬುವವರೊಂದಿಗೆ ಮದುವೆಯಾಗಿದ್ದರು. ಇವರಿಗೆ ರೇವತಿ ಎಂಬ ಮಗಳೂ ಇದ್ದು ಈಕೆ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ಇನ್ನೂ 2022ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿರುವ ಆರ್‌ಜಿವಿ ಇಂದಿಗೂ ಸಿಂಗಲ್ ಆಗಿಯೇ ಕಾಲ ಜಾಳೆಯುತ್ತಿದ್ದಾರೆ.