`ಆತ, ನನ್ನ ಜೀವನವನ್ನು ಹಾಳು ಮಾಡಿಬಿಟ್ಟ` ಕಣ್ಣೀರು ಹಾಕಿದ ಕನ್ನಡದ ಖ್ಯಾತ ನಟಿ..!
Poonam Kaur: ನಾಯಕಿ ಪೂನಂ ಕೌರ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ, ಈಕೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಅಷ್ಟೆ ಅಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕೇವಲ ಕೆಲವೇ ಚಿತ್ರಗಳನ್ನು ಮಾಡಿದರೂ ತನ್ನ ಗ್ಲಾಮರ್‌ನಿಂದ ಈ ನಟಿ ಪ್ರೇಕ್ಷಕರ ಮನದಲ್ಲಿ ನೆಲೆಯೂರಿದ್ದಾರೆ. ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿರುವ ಪೂನಂ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.
ಪೂನಂ ಕೌರ್ ಈ ಹಿಂದೆ ತ್ರಿವಿಕ್ರಮ್ ಅವರ ಬಗ್ಗೆ ಸಾಕಷ್ಟು ಬಾರಿ ಪೋಸ್ಟ್ ಮಾಡಿದ್ದರು. ಇದೀಗ ನಟಿ ಪೂನಂ ಕೌರ್, ತ್ರಿವಿಕ್ರಮ್ ನನ್ನ ಜೀವನವನ್ನೆ ಹಾಳು ಮಾಡಿಬಿಟ್ಟ ಎಂದು ಹೇಳಿಕೊಂಡಿದ್ಧಾರೆ.
ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೂನಂ ಕೌರ್ ಕಲೆದ ಭಾರಿಯೂ ಕೂಡ ದೂರು ನೀಡಿದ್ದರು. ರಾಜಕೀಯ ಹಿನ್ನೆಲೆ ಇಲ್ಲದ ಕಾರಣ ಅಂದು ತ್ರಿವಿಕ್ರಮ್ ವಿರುದ್ಧ ನೀಡಿದ ದೂರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗಷ್ಟೇ ಈ ಬಗ್ಗೆ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ. ಎಷ್ಟೆ ಭಾರಿ ದೂರು ನೀಡಿದರು ಕೂಡ ತ್ರಿವಿಕ್ರಮ್ ವಿರುದ್ಧ ಯಾರೂ ಕೂಡ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪೂನಂ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಸದ್ಯ ನಟಿ ಪೂನಂ, ನಿರ್ದೇಶಕನ ಕುರಿತು ಮಾಡಿರುವ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.