Kannada celebrity: ಪ್ರೇಮಿಗಳ ಪಾತ್ರ ಮಾಡುತ್ತಲೇ ಲವ್ ಮ್ಯಾರೇಜ್ ಆದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು
ರಕ್ಷಿತಾ-ಪ್ರೇಮ್ : ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಸ್ಟಾರ್ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಸಹ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು.
ವಸಿಷ್ಠ ಸಿಂಹ-ಹರಿಪ್ರಿಯಾ : ಚಂದನವನದ ಹೊಸ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ. ಒಟ್ಟಿಗೆ ನಟಿಸದೇ ಇದ್ದರೂ ಪ್ರೀತಿಸಿ ಮದುವೆ ಆಗಿದ್ದಾರೆ. ಎರಡೂವರೆ ವರ್ಷ ತಮ್ಮಿಬ್ಬರ ಪ್ರೀತಿಯನ್ನು ಇಬ್ಬರೂ ಗುಟ್ಟಾಗಿ ಇಟ್ಟು, ಬಳಿಕ ಮದುವೆಯಾದರು.
ದಿಗಂತ್-ಐಂದ್ರಿತಾ : ಐಂದ್ರಿತಾ ಹಾಗೂ ದಿಗಂತ್ ಚಂದನವನದ ಮತ್ತೊಂದು ಕ್ಯೂಟ್ ಜೋಡಿ. ಇಬ್ಬರೂ ‘ಮನಸಾರೆ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಚಿತ್ರದ ಶೂಟಿಂಗ್ ವೇಳೆ ದಿಗಂತ್ ಅವರಿಗೆ ಅನಾರೋಗ್ಯ ಕಾಡಿದಾಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರು. ಹೀಗೆ ಹುಟ್ಟಿದ ಪ್ರೀತಿ ಈಗ ಸುಮಧುರ ದಾಂಪತ್ಯವಾಗಿದೆ.
ಯಶ್-ರಾಧಿಕಾ : ಯಶ್ ಹಾಗೂ ರಾಧಿಕಾ ಪಂಡಿತ್ ಕೂಡ ಪ್ರೀತಿಸಿ ಮದುವೆಯಾದವರು. ನಂದಗೋಕುಲ ಧಾರಾವಾಹಿಯಲ್ಲಿ ಯಶ್ ಹಾಗೂ ರಾಧಿಕಾ ಒಟ್ಟಾಗಿ ನಟಿಸಿದರು. ಬಳಿಕ ಮೊಗ್ಗಿನ ಮನಸು ಚಿತ್ರದಲ್ಲಿ ಒಟ್ಟಿಗೆ ಬೆಳ್ಳಿತೆರೆ ಮೇಲೆ ನಟಿಸಿದರು. ಇಬ್ಬರ ಮಧ್ಯೆ ಇದ್ದ ಗೆಳೆತನ ಪ್ರೀತಿಯಾಗಿ ಬದಲಾಯಿತು. ಕೆಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ಪ್ರೇಮಿಗಳಾಗಿ ನಟಿಸಿದರು. 2016ರಲ್ಲಿ ಮದುವೆ ಆದರು. ಆಯ್ರಾ ಹಾಗೂ ಯಥರ್ವ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ಅಂಬರೀಷ್-ಸುಮಲತಾ: ಮಂಡ್ಯದ ಗಂಡು ಅಂಬರೀಷ್ ಹಾಗೂ ಸುಮಲತಾ ಪ್ರೇಮಕಥೆ ಎವರ್‌ಗ್ರೀನ್. ‘ಆಹುತಿ’ ಸಿನಿಮಾದಲ್ಲಿ ಅಂಬರೀಷ್-ಸುಮಲತಾ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಸಿನಿಮಾ ಸೆಟ್‌ನಲ್ಲಿ ಆದ ಈ ಪರಿಚಯ ಸ್ನೇಹವಾಗಿ ಬೆಳೆದು ನಂತರ ಪ್ರೇಮವಾಯಿತು. ಬಳಿಕ ಇಬ್ಬರೂ ಮದುವೆಯಾದರು.