ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌

Sun, 10 Nov 2024-8:09 am,

Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್‌ ನಟಿ ಮಾನಸಾ ಮನೋಹರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.   

ಈ ಮುಂಚೆ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮೀರಾ ಪಾತ್ರವನ್ನು ನಿರ್ವಹಿಸುವ ಮೂಲಕ ಜನ ಮನ ಗೆದ್ದಿದ್ದ ನಟಿ ಮಾನಸಾ ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಬ್ಯೂಸಿಯಾಗಿದ್ದಾರೆ.   

ಕಿರುತೆರೆಯಲ್ಲಿ ತಮ್ಮ ಅಬಿಮಾನಯದ ಮೂಲಕ ಮನೆಮಾತಾಗಿರುವ ಮಾನಸ ಅವರು ಇದೀಗ ಪ್ರೀತಂ ಚಂದ್ರ ಎಂಬುವವರನ್ನು ಮದುವೆಯಾಗಿದ್ದಾರೆ.   

ಮಾನಸಾ ಮನೋಹರ್‌ ಅವರಿಗೆ ಇದು ಎರಡನೆ ಮದುವೆಯಾಗಿದ್ದು, ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.  

ಮಾನಸಾ ಮನೋಹರ್‌ ಅವರು ಮದುವೆಯಾಗಿರುವ ಪ್ರೀತಂ ಫುಟ್ಬಾಲ್ ಪ್ಲೇಯರ್‌ ಆಗಿದ್ದು, ಈ ಜೋಡಿಯ ಮದುವೆಯಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.  

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಪತಿಯೊಂದಿಗಿನ ಫೋಟೋ ಹಂಚಿಕೊಂಡಿರುವ ಮಾನಸಾ ಅವರು "ಥ್ಯಾಂಕ್ಸ್‌ ಫಾರ್‌ ಮ್ಯಾರಿಯಿಂಗ್‌ ಮಿ" ಎಂದು ಬರೆದುಕೊಂಡಿದ್ದಾರೆ.  

ಸದ್ಯ ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.   

ನಟಿ ಮಾನಸಾ ಅವರ ಪತಿ ಪ್ರೀತಂ ಅವರು ಫುಟ್ಬಾಲ್ ಅಕಾಡೆಮಿಯನ್ನು ನಡೆಸುತ್ತಿದ್ದು, ಈ ಜೋಡಿ ಶ್ವಾನ ಪ್ರಿಯರು. ಮದುವೆ ಸಮಾರಂಭದಲ್ಲಿ ಈ ಜೋಡಿ ತಮ್ಮ ಪ್ರೀತಿಯ ಶ್ವಾನದೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.   

ಇನ್ನೂ ಮದುವೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಮಾನಸಾ ಅವರು " ಇದು ನನ್ನ ಎರಡನೆ ಮದುವೆಯಾಗಿರಬಹುದು ಆದರೆ ಇದೇ ನನ್ನ ಏಕೈಕ ಮದುವೆ. ಕೆಲವರು ಮದುವೆಯಾಗಬೇಕೆಂಬ ಕಾರಣಕ್ಕೆ ದೈಹಿಕವಾಗಷ್ಟೆ ಮದುವೆಯಾಗುತ್ತಾರೆ, ಅಲ್ಲಿ ಪ್ರೀತಿ ಇರುವುದಿಲ್ಲ. ನಮ್ಮ ಒಳ್ಳೆಯದಕ್ಕಾಗಿ ನಾವು ಕೆಲವೊಮ್ಮೆ ಮೂವ್‌ ಆನ್‌ ಆಗಬೇಕಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.   

"ನನ್ನ ಜೀವನದಲ್ಲಿ ನಾನೀಗ ನಿಜ ಪ್ರೀತಿಯನ್ನು ಕಂಡುಕೊಂಡಿದ್ದೇನೆ.. ಪ್ರೀತಂ ನನ್ನ ಜೀವನದ ಟ್ರೂ ಲವ್‌, ಇದರ ಬಗ್ಗೆ ನನಗೆ ಸಾಕಷ್ಟು ಖಷಿ ಇದೆ" ಎಂದು ನಟಿ ಹೇಳಿಕೊಂಡಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link