ರಾಮ್‌ಚರಣ್ ಮಗಳ ಆರೈಕೆ ಮಾಡುವ ಈ ಖ್ಯಾತ ದಾದಿಯ ಸಂಬಳ ಎಷ್ಟು ಲಕ್ಷ ಗೊತ್ತಾ?
ರಾಮ್‌ಚರಣ್ ಹಾಗೂ ಉಪಾಸನಾ ದಂಪತಿ ತಮ್ಮ ಮಗಳಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ಮನೆಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ.
ಮಗಳ ಆರೈಕೆಗಾಗಿ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುವ ಜನಪ್ರಿಯ ದಾದಿಯನ್ನು ರಾಮ್‌ಚರಣ್ ಹಾಗೂ ಉಪಾಸನಾ ನೇಮಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಮ್‌ಚರಣ್ ದಂಪತಿ ಮಗಳ ಜೊತೆ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದು ಜೊತೆಗೆ ನ್ಯಾನಿ(ದಾದಿ) ಸಾವಿತ್ರಿ ಸಹ ಕಾಣಿಸಿಕೊಂಡಿದ್ದು, ಎಲ್ಲರ ಗಮನಸೆಳೆದಿದೆ.
ಸಾವಿತ್ರಿ ದಾದಿ ಕೆಲ ವರ್ಷಗಳ ಹಿಂದೆ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಮಗ ತೈಮೂರ್ ಅಲಿಖಾನ್ ಅವರನ್ನು ಸಹ ಆರೈಕೆ ಮಾಡಿದ್ದರು.
ವರದಿಯ ಪ್ರಕಾರ, ತೈಮೂರ್ ಆರೈಕೆಗೆ ಸಾವಿತ್ರಿ ಅವರಿಗೆ ತಿಂಗಳಿಗೆ ಒಂದು ಲಕ್ಷ ಸಂಬಳ ಸಿಗುತ್ತಿತ್ತು ಎನ್ನಲಾಗಿದೆ.
ರಾಮ್‌ಚರಣ್ ಪುತ್ರಿ ಕ್ಲಿಂಕಾರಳ ಆರೈಕೆಗೆ ಸಾವಿತ್ರಿ ದಾದಿ ತಿಂಗಳಿಗೆ 3 ಲಕ್ಷದ ವರೆಗೆ ಸಂಬಳ ನೀಡುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.