Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್‌ ನಟ ಯಾರು ಗೊತ್ತಾ?

Thu, 18 Apr 2024-3:05 pm,

ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸಿನಿ ಬದುಕಿನಲ್ಲಿ ಉತ್ತಂಗದಕ್ಕೇರಿದ ನಟಿ ನಗ್ಮಾ ತಮ್ಮ ವೃತ್ತಿ ಜೀವನದಲ್ಲಿ ಕಂಡ ಯಶಸ್ಸನ್ನು ವೈಯಕ್ತಿಕ ಜೀವನದಲ್ಲಿ ಕಾಣಲಿಲ್ಲ.. ಸೆಲೆಬ್ರಿಟಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಈಕೆ ಅವರಿಂದ ದೂರವಾಗಿದ್ದಕ್ಕೆ ಮದುವೆ ಎನ್ನುವ ವಿಚಾರದಿಂದಲೇ ಹಿಂದೆ ಸರಿದರು.    

ಕುರುಬನ ರಾಣಿ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಹೃದಯ ಗೆದ್ದ ಈ ಚೆಲುವೆ ತನ್ನ ಮೊದಲ ಸಿನಿಮಾದಿಂದಲೇ ದೊಡ್ಡ ಖ್ಯಾತಿ ಗಳಿಸಿದರು.. ಮುದ್ದು ಮುಖ, ಮಗ್ಧ ಅಭಿನಯದ ಮೂಲಕವೇ ಎಲ್ಲರನ್ನು ಸೆಳೆದ ಈಕೆ ರವಿಮಾಮಾ ಸಿನಿಮಾದ ಮೂಲಕ ಬಹಳ ದಿನಗಳ ನಂತರ ಕನ್ನಡ ಸಿನಿರಂಗಕ್ಕೆ ಕಂಬ್ಯಾಕ್‌ ಮಾಡಿದ್ದರು..   

 ಡಾ. ವಿಷ್ಣುವರ್ಧನ್ ಅವರ ಹೃದಯವಂತ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಈಕೆ ಖ್ಯಾತ ತಮಿಳು ನಟ ಶರತ್‌ ಅವರನ್ನು ಪ್ರೀತಿಸುತ್ತಿದ್ದರು.. ಇವರಿಬ್ಬರೂ ಪ್ರೀತಸುತ್ತಿದ್ದಾರೆ... ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಆಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು..   

 ಆದರೆ ನಟ ಶರತ್‌ ರಾಧಿಕಾ ಎಂಬುವವರೊಂದಿಗೆ ಮದುವೆಯಾಗಿ ನಗ್ಮಾ ಅವರಿಂದ ದೂರವಾದರು... ನಂತರ ಇವರ ಹೆಸರು ಖ್ಯಾತ ಕ್ರಿಕೆಟರ್‌ ಸೌರವ್‌ ಗಂಗೂಲಿ ಅವರೊಂದಿಗೆ ತಳುಕುಹಾಕಿಕೊಂಡಿತ್ತು.. ಅಲ್ಲದೇ ಇವರಿಬ್ಬರು ಜೊತೆಗೆ ಸುತ್ತಾಡುವ ದೃಶ್ಯಗಳೂ ಸೆರೆಯಾಗಿದ್ದವು.. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯದೇ ಮುರಿದುಬಿತ್ತು..   

ನಂತರ ರಾಜಕೀಯಕ್ಕೆ ಕಾಲಿಟ್ಟ ನಟಿ ಮದುವೆ ಎಂಬ ಬಂಧನದಿಂದ ದೂರವೇ ಉಳಿದುಬಿಟ್ಟರು.. ಇಲ್ಲಿಯವರೆಗೂ ಆಕೆ ಮದುವೆ ಸಂಸಾರ ಈ ಯಾವ ವಿಚಾರಗಳ ಬಗ್ಗೆಯೂ ಯೋಚಿಸಿಲ್ಲ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link