`ಶಾರುಖ್ ಖಾನ್ - ಕರಣ್ ಜೋಹರ್ ಸಲಿಂಗ ಕಾಮಿಗಳು` : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್ ಹೇಳಿಕೆ
ಸುಚಿತ್ರಾ ತಮ್ಮ ಮಾಜಿ ಪತಿ ಕಾರ್ತಿಕ್ ಕುಮಾರ್ ಸಲಿಂಗಕಾಮಿ ಎಂದು ಆರೋಪಿಸಿದ್ದಾರೆ. ಅಲ್ಲದೇ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಜೊತೆ ವಿದೇಶಕ್ಕೆ ತೆರಳಿದ ವಿಚಾರವಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ನನ್ನ ಮಾಜಿ ಪತಿ ಕಾರ್ತಿಕ್ ಅವರು ಶಾರುಖ್ ಮತ್ತು ಕರಣ್ ಜೋಹರ್ ಜೊತೆ ಲಂಡನ್ನಲ್ಲಿ "ಸಲಿಂಗಕಾಮಿ ಸಭೆ" ನಡೆಸಿದ್ದಾರೆ ಎಂದು ಹೇಳಿದ್ದಾರೆ. ಸುಚಿತ್ರಾ ಕೊಟ್ಟ ಈ ಹೇಳಿಕೆ ಶಾರುಖ್ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದೆ.
ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಇಬ್ಬರೂ ಸಲಿಂಗಕಾಮಿ ಸಭೆಗಳಿಗೆ ಹೋಗೋದು ಸಾಮಾನ್ಯ. ಸಲಿಂಗಕಾಮ ಕಾನೂನುಬಾಹಿರವಲ್ಲದ ದೇಶಗಳಿಗೆ ಇವರೆಲ್ಲ ಹೋಗೋದು ಎಂದು ಸುಚಿತ್ರಾ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರಿನ್ ಕೂಡ ಬಾಲಿವಡ್ ನಟ ಶಾರುಖ್ ಖಾನ್ ವಿರುದ್ಧ ಇಂಥದ್ದೊಂದು ಆರೋಪ ಮಾಡಿದ್ದರು.
ಶಾರುಖ್ ಖಾನ್ ಸಲಿಂಗಿ ಎಂದು ಹಲವರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ತಸ್ಲೀಮಾ ನಸ್ರಿನ್ ಪೋಸ್ಟ್ ಮಾಡಿದ್ದರು.
ಇದೀಗ ಹಿರಿಯ ಗಾಯಕಿ ಸುಚಿತ್ರಾ ಅವರ ಆರೋಪ ಹೇಳಿಕೆ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.