South Actress: ಪ್ರಭುದೇವ ಜೊತೆ ಪ್ರೀತಿ.. ಕಿರಿಯ ನಿರ್ದೇಶಕನ ಜೊತೆ ಮದುವೆ, ಸೌತ್‌ʼನ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಈಕೆ!

Mon, 12 Feb 2024-7:59 am,

ಸೌತ್‌ ಸಿನಿ ಇಂಡಸ್ಟ್ರಿಯ ಅತಿ ಹೆಚ್ಚು ಸಂಭಾವನೆ ಪಡೆವ ಈ ನಟಿಗೆ ಸದ್ಯ ಬಾಲಿವುಡ್‌ನಲ್ಲೂ ಬಹು ಬೇಡಿಕೆ ಬಂದಿದೆ.

ಅಂದಕ್ಕೆ ಮತ್ತೊಂದು ಹೆಸರೆಂಬಂತಿರುವ ಈ ನಟಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಈ ಸೌತ್‌ ನಟಿಯ ಮದುವೆಗೂ ಮುನ್ನ ಒಂದು ವದಂತಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.

ಸೌತ್‌ ನ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಪ್ರಸಿದ್ಧ ನಿರ್ದೇಶಕ ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದರಂತೆ. ಆದರೆ ಪ್ರಭುದೇವ ಅವರಿಗೆ ಮದುವೆಯಾಗಿ ಮಕ್ಕಳಿದ್ದರು. ಕೆಲವು ಕಾರಣದಿಂದ ಈ ಜೋಡಿ ಮದುವೆಯಾಗಲಿಲ್ಲ. 

ಆ ನಂತರ ನಯನತಾರಾ ತನಗಿಂತ ಕಿರಿಯರಾದ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿದರು. ಏಳು ವರ್ಷಗಳ ಕಾಲ ಡೇಟಿಂಗ್ ಬಳಿಕ ಮದುವೆಯಾದರು.

ಮದುವೆಯಾಗಿ ಐದು ತಿಂಗಳ ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಅಮ್ಮನಾದರು. 

2003 ರಲ್ಲಿ ವೃತ್ತಿಯನ್ನು ಆರಂಭಿಸಿದ ನಯನತಾರಾ ಇಪ್ಪತ್ತು ವರ್ಷಗಳಲ್ಲಿ 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link