ಸಿನೆಮಾ ರಂಗಕ್ಕೆ ಬರುವುದಕ್ಕಾಗಿ ತಮ್ಮ ಹೆಸರು ಬದಲಾಯಿಸಿಕೊಂಡ ಖ್ಯಾತನಾಮರು..!
ಬಾಲಿವುಡ್ ಕಿಲಾಡಿ ಅಥವಾ ಆಕ್ಶನ್ ಕಿಂಗ್ ಎಂದೇ ಗುರುತಿಸಿಕೊಂಡಿರುವ ಅಕ್ಷಯ್ ಕುಮಾರ್ ನಿಜವಾದ ಹೆಸರು ರಾಜೀವ್ ಹರಿಓಂ ಬಾಟಿಯಾ. ಚಿತ್ರರಂಘಕ್ಕೆ ಕಾಲಿಡುವ ವೆಳೆ ಅವರು ತಮ್ಮ ಹೆಸರನ್ನು ಅಕ್ಷಯ್ ಕುಮಾರ್ ಎಂದು ಬದಲಾಯಿಸಿಕೊಂಡರು.
ಬಾಲಿವುಡ್ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಆಶ್ಚರ್ಯ ಅಂದರೆ ಇವರ ಹೆಸರು ದಿಲೀಪ್ ಅಲ್ಲ ಮಹಮ್ಮದ್ ಯುಸೂಫ್ ಖಾನ್.
ನಗ್ಮಾ ಮುಂಬಯಿಯಲ್ಲಿ ಜನಿಸಿದವರು. ಇವರ ಮೂಲ ಹೆಸರು ನಂದಿತಾ ಅರವಿಂದ್ ಮೊರಾರ್ಜಿ.
ತನ್ನಮೋಹಕ ನಟನೆಯಿಂದ ಎಲ್ಲರ ಮನಗೆದ್ದಿರುವ ರೇಖಾ ಅವರ ನಿಜವಾದ ಹೆಸರು ಭಾನುರೇಖಾ ಗಣೇಶನ್, ಸಿನೆಮಾ ರಂಗಕ್ಕೆ ಬಂದ ನಂತರ ಅವರು ತನ್ನ ಹೆಸರನ್ನು ರೇಖಾ ಎಂದಷ್ಟೇ ಮಾಡಿಕೊಂಡರು.
1997ರಲ್ಲಿ ಪರ್ ದೇಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಹಿಮಾ ಚೌಧರಿಗೆ ಮಹಿಮಾ ಎಂದು ನಾಮಕರಣ ಮಾಡಿದವರು ಖ್ಯಾತ ನಿರ್ದೇಶಕ ಸುಭಾಷ್ ಘಾಯ್. ಮಹಿಮಾ ನಿಜವಾದ ಹೆಸರು ರೀತು ಚೌಧರಿ.
.ತನ್ನ ಅಭೂತಪೂರ್ವ ನಟನೆಯಿಂದ ಬಾಲಿವುಡ್ ನಲ್ಲಿ ಛಾಪು ಮೂಡಿಸಿರುವ ತಬು ಅವರ ನಿಜವಾದ ಹೆಸರು ತಬ್ಸುಮ್ ಹಶೀಮ್ ಖಾನ್. ಸರಳವಾಗಿ ನೆನೆಪಿರುವಂತೆ ಮಾಡಲು ಅವರು ತನ್ನಹೆಸರನ್ನು ತಬು ಎಂದು ಮಾಡಿಕೊಂಡರು.
ಶಿಲ್ಪಾ ಶೆಟ್ಟಿಯ ಮೂಲ ಹೆಸರು ಅಶ್ವಿನಿ ಶೆಟ್ಟಿ. ಸಿನೆಮಾಕ್ಕೆ ಬರುವ ಸಲುವಾಗಿ ಅಶ್ವಿನಿ ಬದಲಾಗಿ ಅವರು ತಮ್ಮ ಹೆಸರನ್ನು ಶಿಲ್ಪಾ ಎಂದು ಮರುನಾಮಕರಣ ಮಾಡಿಕೊಂಡರು.
1967ರಲ್ಲಿ ಜನಿಸಿದ ನಟನ ಹೆಸರು ಸಹಬ್ಜಾದೆ ಇರ್ಫಾನ್ ಅಲಿ ಖಾನ್. ಆದರೆ ತನ್ನನ್ನು ಬರೀ ಇರ್ಫಾನ್ ಖಾನ್ ಎಂದು ಕರೆದರೆ ಸಾಕು ಎಂದು ಹೇಳಿದ ನಂತರ , ಎಲ್ಲರೂ ಅವರನ್ನು ಇರ್ಫಾನ್ ಖಾನ್ ಎಂದೇ ಕರೆಯಲು ಆರಂಭಿಸಿದರು.
ಬಾಲಿವುಡ್ ಬಾರ್ಬಿ ಡಾಲ್ ಕತ್ರಿನಾ ಕೈಫ್ ಅವರ ನಿಜವಾದ ಹೆಸರು, ಕೆಟ್ ತುರ್ಕೆಟಾ . ಕತ್ರಿನಾ ತನ್ನ ಮೊದಲ ಸಿನೆಮಾದ ವೇಳೆಯೇ ತನ್ನ ಹೆಸರನ್ನು ಬದಲಾಯಿಸಿಕೊಂಡರು ಅವರ ತಂದೆಯ ಹೆಸರಿನ ಕೈಫ್ ಅನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡಿದ್ದಾರೆ.
ಇನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನಿಜವಾದ ಹೆಸರು, ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. 1988ರಲ್ಲಿ ಬಿಡುಗಡೆಯಾದ ಬೀವಿ ಹೋತೋ ಐಸಾಇವರ ಸಲ್ಮಾನ್ ನಟನೆಯ ಮೊದಲ ಚಿತ್ರ..