ಟೀಂ ಇಂಡಿಯಾ ಗೆದ್ದಿದ್ದು ಶಮಿ, ಅಯ್ಯರ್, ಕೊಹ್ಲಿಯಿಂದಲ್ಲ.. ಈತನಿಂದ; ಈತನೇ ಭಾರತದ ಶಕ್ತಿ!!

Thu, 16 Nov 2023-4:03 pm,

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 398 ರನ್ ಗಳ ಬೃಹತ್ ರನ್ ಕಲೆಹಾಕಿತ್ತು. ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಶತಕದಾಟವಾಡಿದರೆ, ಶುಭ್ಮನ್ ಗಿಲ್, ರೋಹಿತ್ ಶರ್ಮ, ಕೆ ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.

ಈ ಬೃಹತ್ ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ, 48.5 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 327 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಬೌಲಿಂಗ್’ನಲ್ಲಿ ಮಿಂಚಿದ ಮೊಹಮ್ಮದ್ ಶಮಿ ಏಳು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಅನೇಕ ದಾಖಲೆಗಳನ್ನು ಬ್ರೇಕ್ ಮಾಡಿರುವ ಮೊಹಮ್ಮದ್ ಶಮಿ, ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌’ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು.

ಇದಷ್ಟೇ ಅಲ್ಲದೆ, ಶಮಿ ಏಕದಿನ ವಿಶ್ವಕಪ್‌’ನ ನಾಕೌಟ್ ಪಂದ್ಯಗಳಲ್ಲಿ 7 ವಿಕೆಟ್‌ ಪಡೆದ ಮೊದಲ ಎನಿಸಿಕೊಂಡರು. ಜೊತೆಗೆ ಈ ಬಾರಿಯ ವಿಶ್ವಕಪ್‌’ನಲ್ಲಿ ಮೂರು ಬಾರಿ ಐದು ವಿಕೆಟ್‌’ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದಷ್ಟೇ ಅಲ್ಲದೆ, ಶಮಿ ಏಕದಿನ ವಿಶ್ವಕಪ್‌’ನ ನಾಕೌಟ್ ಪಂದ್ಯಗಳಲ್ಲಿ 7 ವಿಕೆಟ್‌ ಪಡೆದ ಮೊದಲ ಎನಿಸಿಕೊಂಡರು. ಜೊತೆಗೆ ಈ ಬಾರಿಯ ವಿಶ್ವಕಪ್‌’ನಲ್ಲಿ ಮೂರು ಬಾರಿ ಐದು ವಿಕೆಟ್‌’ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಂದಹಾಗೆ ಅಭಿಮಾನಿಗಳ ಪ್ರಕಾರ, ಕೊಹ್ಲಿ, ಶಮಿ, ಅಯ್ಯರ್’ಗಿಂತ ಹೆಚ್ಚಾಗಿ ಟೀಂ ಇಂಡಿಯಾ ಗೆಲ್ಲಲು ಕಾರಣವಾಗಿದ್ದು ಬೇರೊಬ್ಬ ವ್ಯಕ್ತಿಯಂತೆ. ಹೀಗಂತ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಆ ವ್ಯಕ್ತಿ ಬೇರೆ ಯಾರು ಅಲ್ಲ ಸೂಪರ್ ಸ್ಟಾರ್ ರಜನಿಕಾಂತ್‌. ಕಳೆದ ದಿನ ಸ್ಟೇಡಿಯಂನಲ್ಲಿ ಅನೇಕ ಸೆಲೆಬ್ರಿಟಿಗಳು ಸೇರಿದ್ದರು,. ಅದರಲ್ಲಿ ಒಬ್ಬರ ತಲೈವಾ ರಜನಿಕಾಂತ್. ಇವರಿಂದಾಗಿಯೇ ಕಳೆದ ದಿನ ಪಂದ್ಯ ಗೆದ್ದಿದ್ದೇವೆ ಎನ್ನುತ್ತಾ ಕೆಲವರು ತಮಾಷೆ ಪೋಸ್ಟ್‌ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ, ಫೈನಲ್ ಪಂದ್ಯಕ್ಕೂ ತಲೈವಾ ಬರಲೇ ಬೇಕು ಎಂದು ಹೇಳುತ್ತಿದ್ದಾರೆ ಫ್ಯಾನ್ಸ್.

ZEENEWS TRENDING STORIES

By continuing to use the site, you agree to the use of cookies. You can find out more by Tapping this link