SocialMediaದಲ್ಲಿ ಮತ್ತೆ ಎದ್ದಿದೆ Virushka ಅಲೆ

Mon, 11 Jan 2021-6:30 pm,

.ವಿರಾಟ್ ಕೊಹ್ಲಿ ಅನುಷ್ಕಾ  ಹೆರಿಗೆ ಸುದ್ದಿ ಬಗ್ಗೆ  ಟ್ವೀಟ್ ಮಾಡಿದ್ದಾರೆ. ನಮಗೆ ಇಂದು ಹೆಣ್ಣು ಮಗು ಜನಿಸಿದ್ದು,  ಬಹಳ  ಸಂತೋಷವಾಗಿದೆ ಎಂದು ಹೇಳಿದ್ದಾರೆ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳಿಗಾಗಿ  ಕೃತಜ್ಞರಾಗಿರುವುದಾಗಿಯೂ ಹೇಳಿದ್ದಾರೆ.  ಜೀವನದಲ್ಲಿ ಈ ಸಂತೋಷವನ್ನು ಅನುಭವಿಸಲು  ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಹೊರಬರುತ್ತಿದ್ದಂತೆ, ಬಾಲಿವುಡ್ ಮತ್ತು ಕ್ರಿಕೆಟ್ ಪ್ರೇಮಿಗಳ ಸಂತಸಕ್ಕೆ  ಪಾರವೇ ಇಲ್ಲ.  ಅಭಿಮಾನಿಗಳು ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ದಂಪತಿಯನ್ನು ಅಭಿನಂದಿಸುತ್ತಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವಿರುಷ್ಕಾ ಅಲೆ ಎದ್ದಿದೆ. ಈ ಸಂತಸದ ಸುದ್ದಿಗಾಗಿ ಇಬ್ಬರ ಅಭಿಮಾನಿಗಳು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದರು. ಇದೀಗ ವಿರಾಟ್ ಕೋಹ್ಲಿ  ಅನುಷ್ಕಾ ಅಭಿಮಾನಿಗಳು ಇವರಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ.

ಬಾಲಿವುಡ್ ಮತ್ತು ಕ್ರಿಕೆಟ್ ಖ್ಯಾತನಾಮರು  ವಿರುಷ್ಕಾ ದಂಪತಿಯನ್ನು ಅಭಿನಂದಿಸುತ್ತಿದ್ದಾರೆ. ವಿರಾಟ್-ಅನುಷ್ಕಾ  ಕುಟುಂಬಕ್ಕೆ ಇದು ತುಂಬಾ ಸಂತೋಷದ ಸಮಯ. 

ಅನುಷ್ಕಾ ಮತ್ತು ವಿರಾಟ್ ಅವರ ಮದುವೆಯ  ಫೋಟೋಗಳು, ಮತ್ತು ಅನುಷ್ಕಾ ಗರ್ಭಧಾರಣೆಯ ನಂತರದ ಫೊಟೋಗಳನ್ನು ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link