ಫಾಪ್ ಬಳಿಕ RCBಯ ಮುಂದಿನ ಅಧಿಪತಿ ಈತನೇ...! ಜೂ.ಕೊಹ್ಲಿ ಖ್ಯಾತಿಯ ಈ ಆಟಗಾರನಿಗೆ ಕ್ಯಾಪ್ಟನ್ಸಿ ಪಟ್ಟ!
ಎಲಿಮಿನೇಟರ್ 1ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು.
ಇನ್ನು ಈ ಬೆನ್ನಲ್ಲೇ ಆರ್‌ಸಿಬಿ ನಾಯಕತ್ವ ಬೇರೆಯವರ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಫಾಫ್ ಡು ಪ್ಲೆಸಿಸ್‌ಗೆ ಈಗ 39 ವರ್ಷ, ಮುಂದಿನ ವರ್ಷ 40 ವರ್ಷ ಆಗುತ್ತೆ. ಹೀಗಾಗಿ ಎಲ್ಲಾ ಸ್ವರೂಪದ ಕ್ರಿಕೆಟ್’ಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.
ಹೀಗಿರುವಾಗ ಆರ್’ಸಿಬಿ ಮುಂದಿನ ನಾಯಕ ರಜತ್ ಪಾಟಿದಾರ್ ಆಗಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಜತ್ ಪಾಟಿದಾರ್ ತಮ್ಮ ತಂಡಕ್ಕಾಗಿ, ತಂಡದ ಗೆಲುವಿಗಾಗಿ ಮದುವೆಯನ್ನೇ ಮುಂದೂಡಿದ್ದಾರೆ. ಅಷ್ಟೇ ಅಲ್ಲದೆ, ತಂಡದ ಪರ ಅಬ್ಬರಿಸಿದ್ದಾರೆ. ಹೀಗಿರುವಾಗ ನಾಯಕತ್ವ ನೀಡಿದರೆ ತಪ್ಪಾಗಲ್ಲ ಎಂದು ಫ್ಯಾನ್ಸ್ ಮನದ ಮಾತು.
ರಜತ್ ಪಾಟಿದಾರ್ ಆಟದ ಶೈಲಿ ಕೊಂಚ ವಿರಾಟ್ ಕೊಹ್ಲಿಯನ್ನೇ ಹೋಲುತ್ತದೆ. ಅವಕಾಶ ಸಿಕ್ಕಾಗೆಲ್ಲ ಅದ್ಭುತವಾಗಿ ಬಳಕೆ ಮಾಡಿಕೊಳ್ಳುವ ರಜತ್, ಹಳೆ ಕೊಹ್ಲಿಯನ್ನು ನೆನೆಪಿಸುತ್ತಿರುವುದು ಮಾತ್ರ ಸುಳ್ಳಲ್ಲ.