ರೈತರು ಇನ್ನು ಮುಂದೆ ಹಣದ ಬಗ್ಗೆ ಚಿಂತಿಸಬೇಕಾಗಿಲ್ಲ, PNB ಯ ಈ ಯೋಜನೆಯು ನೀಡುತ್ತದೆ ತ್ವರಿತ ಸಾಲ

Thu, 23 Sep 2021-9:14 pm,

ರೈತರ ಯಾವುದೇ ರೀತಿಯ ತುರ್ತು ಅಗತ್ಯಗಳನ್ನು ಪೂರೈಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನ ಯೋಜನೆ ಇದೆ. ಇದರಲ್ಲಿ ರೈತರು ಕೃಷಿ ಭೂಮಿಯನ್ನು ತಯಾರಿಸಲು ಮತ್ತು ಬೆಳೆಗಳನ್ನು ಬಿತ್ತಲು ಸಾಲ ಪಡೆಯಬಹುದು. ಇದರ ಹೊರತಾಗಿ, ಕೃಷಿ ಮತ್ತು ಗೃಹೋಪಯೋಗಿ ಕೆಲಸಗಳಿಗೆ ಸಂಬಂಧಿಸಿದ ಇತರ ಅಗತ್ಯಗಳಿಗಾಗಿ ಬ್ಯಾಂಕ್ ಸಾಲವನ್ನು ನೀಡಲಾಗುತ್ತದೆ. 

ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ಯಾವುದೇ ರೈತ ಅಥವಾ ರೈತರ ಗುಂಪು ಈ ರೈತ ತ್ವರಿತ ಸಾಲ ಯೋಜನೆಯ ಲಾಭ ಪಡೆಯಬಹುದು ಎಂದು ಪಿಎನ್ ಬಿ  ಹೇಳಿದೆ. ಇದಕ್ಕಾಗಿ, ಕಳೆದ ಎರಡು ವರ್ಷಗಳ ರೈತರ  ದಾಖಲೆ ಸರಿಯಾಗಿರಬೇಕು.  

PNB ಯ ಅಧಿಸೂಚನೆಯ ಪ್ರಕಾರ, ಕಿಸಾನ್ ತತ್ಕಾಲ್ ಸಾಲ ಯೋಜನೆಯಡಿಯಲ್ಲಿ ರೈತರಿಗೆ ತಮ್ಮ ಅಸ್ತಿತ್ವದಲ್ಲಿರುವ ಸಾಲದ ಮಿತಿಯ ಶೇಕಡಾ 25 ರ ವರೆಗೆ ಸಾಲವನ್ನು ನೀಡಲಾಗುವುದು. ಗರಿಷ್ಠ ಮಿತಿ ರೂ. 50,000. ಇದಕ್ಕಾಗಿ, ರೈತರು ಏನನ್ನೂ ಅಡಮಾನ ಮಾಡಬೇಕಾಗಿಲ್ಲ ಅಥವಾ ಯಾವುದೇ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ರೈತರು ಈ ಸಾಲವನ್ನು ಮರುಪಾವತಿಸಲು ಸುಲಭವಾದ ಕಂತುಗಳ ಸೌಲಭ್ಯವನ್ನು ಪಡೆಯುತ್ತಾರೆ, ಇದರಲ್ಲಿ ಅವರು 5 ವರ್ಷಗಳಲ್ಲಿ ಈ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಇದಕ್ಕಾಗಿ, ಸಾಲ ಪಡೆದ ನಂತರ ರೈತನಿಗೆ 12 ತಿಂಗಳ ಸಮಯವನ್ನು ಸಹ ನೀಡಲಾಗುತ್ತದೆ.

PNB ಕರೋನಾ ಸಮಯದಲ್ಲಿ ಹಣದ ಕೊರತೆಯನ್ನು ಎದುರಿಸುತ್ತಿರುವ ರೈತರಿಗಾಗಿ ಇಂತಹ ಮತ್ತೊಂದು ಯೋಜನೆಯನ್ನು ಆರಂಭಿಸಿದೆ, ಇದನ್ನು 'ಸ್ವ ಸಹಾಯ ಗುಂಪು ಕೋವಿಡ್ ತಕ್ಷಣದ ಸಹಾಯ ಸಾಲ' ಎಂದು ಕರೆಯಲಾಗುತ್ತದೆ. ಇದರಲ್ಲಿ, ರೈತರಿಗೆ 5 ಸಾವಿರದಿಂದ 1 ಲಕ್ಷ ರೂಪಾಯಿಗಳನ್ನು ನೀಡಲು ಅವಕಾಶವಿದೆ. ಇದರಿಂದ ರೈತರು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link