ತಂದೆ ಇಲ್ಲ… ಕುಟುಂಬದ ಪ್ರೀತಿ ದಕ್ಕಲ್ಲಿಲ್ಲ!! ಎಲ್ಲಾ ಇದ್ದೂ ಅನಾಥರಂತೆ ಬೆಳೆದ ಈ ಕ್ರಿಕೆಟಿಗ ಇಂದು ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಕಾರಣನಾದ!

Sat, 13 Jul 2024-2:56 pm,

ಜಸ್ಪ್ರೀತ್ ಬುಮ್ರಾ... ಇದು ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಈ ಪೀಳಿಗೆಯ ಅತ್ಯುತ್ತಮ ಬೌಲರ್ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ವಿಶೇಷವಾದ ಬೌಲಿಂಗ್ ಪ್ರತಿಭೆಯ ಮೂಲಕ 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ಸೂಪರ್ ಸ್ಟಾರ್ ಇವರು

2024ರ ಟಿ 20 ವಿಶ್ವಕಪ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜಸ್ಪ್ರೀತ್ ಬುಮ್ರಾಗೆ ಪ್ರಸ್ತುತ ಪ್ರಶಂಸೆಯ ಸುರಿಮಳೆಯಾಗುತ್ತಿದೆದ. ಎಲ್ಲರೂ ಬುಮ್ರಾ ಅವರನ್ನು ವಿಶ್ವದ ಅತ್ಯುತ್ತಮ ವೇಗಿ ಎಂದು ಹೊಗಳುತ್ತಿದ್ದಾರೆ.

ಆದರೆ ಇದೇ ಬುಮ್ರಾ ಬಾಲ್ಯ ಹೇಗಿತ್ತು ಎಂಬುದು ಅನೇಕರಿಗೆ ತಿಳಿಯದ ಸಂಗತಿ. ಎಲ್ಲಾ ಇದ್ದೂ ಅನಾಥರಂತೆ ಬದುಕಿದ್ದ ಬುಮ್ರಾ ಇಂದು ಇಡೀ ಭಾರತವನ್ನೇ ತನ್ನ ಕುಟುಂಬದಂತೆ ಕಾಣಿತ್ತಿದ್ದಾರೆ. ಅಂತೆಯೇ ಭಾರತೀಯರು ಸಹ ಬುಮ್ರಾರನ್ನು ತಮ್ಮ ಮನೆಮಗನಂತೆ ಸ್ವೀಕರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಯಶಸ್ಸಿನ ಜೊತೆ ಅವರ ಹಿನ್ನೆಲೆಯನ್ನೂ ಸಹ ತಿಳಿಯುವುದು ಅತಿ ಮುಖ್ಯ. ಬುಮ್ರಾ ತಾಯಿ ದಲ್ಜಿತ್ ಕೌರ್ ಬುಮ್ರಾ ತುಂಬಾ ಶ್ರಮಜೀವಿ.

ಜಸ್ಪ್ರೀತ್ ಬುಮ್ರಾ ಅವರ ತಂದೆಯ ಹೆಸರು ಜಸ್ವಿರ್ ಸಿಂಗ್ ಮತ್ತು ತಾಯಿಯ ಹೆಸರು ದಲ್ಜಿತ್ ಕೌರ್ ಬುಮ್ರಾ. ಇವರು ಪಂಜಾಬಿ ಕುಟುಂಬಕ್ಕೆ ಸೇರಿದವರು. ಬುಮ್ರಾ ಆರು ವರ್ಷದವನಿದ್ದಾಗ ಅವರ ತಂದೆ ಜಸ್ವೀರ್ ಸಿಂಗ್ ನಿಧನರಾದರು. ಮೊಮ್ಮಗ ಮತ್ತು ಸೊಸೆಗೆ ಆಶ್ರಯದಂತಿರಬೇಕಾಗಿದ್ದ ಬುಮ್ರಾ ಅಜ್ಜ ಸಂತೋಕ್ ಸಿಂಗ್ ಬುಮ್ರಾ, ಅವರನ್ನು ಬಿಟ್ಟು ಬೇರೆ ಊರಿಗೆ ಹೋದರು.

ಗಂಡನ ಅಕಾಲಿಕ ಮರಣ ಮತ್ತು ಮಾವನ ನಿರ್ಲಕ್ಷ್ಯದಿಂದ ಬುಮ್ರಾ ತಾಯಿ ಒಂಟಿಯಾದರು. ಆದರೂ ಛಲ ಬಿಡದ ಆಕೆ, ಏನೇ ಆಗಲಿ ತನ್ನ ಮಗನನ್ನು ದೊಡ್ಡವನನ್ನಾಗಿ ಮಾಡಬೇಕೆಂದು ಸಂಕಲ್ಪ ಮಾಡಿದರು. ಆಗಲೇ ವಸ್ತ್ರಾಪುರದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದರು. ತನ್ನ ಮಗನಿಗಾಗಿ ಶ್ರಮಪಟ್ಟರು. ಬಾಲ್ಯದಲ್ಲಿ ಬುಮ್ರಾ ಅವರ ಕ್ರಿಕೆಟ್ ಪ್ರೀತಿಯನ್ನು ಗುರುತಿಸಿದ ದಲ್ಜಿತ್ ಕೌರ್ ಅವರನ್ನು ಕ್ರಿಕೆಟ್ ಕಡೆಗೆ ಪ್ರೋತ್ಸಾಹಿಸಿದರು.

ಬಾಡಿಗೆ ಮನೆಯಲ್ಲಿದ್ದ ಬುಮ್ರಾ, ಕೆಳಗಿನ ಮನೆಯ ಮಾಲೀಕರಿಗೆ ತೊಂದರೆಯಾಗದಂತೆ ಗೋಡೆಯ ಕೆಳಗೆ ಚೆಂಡನ್ನು ಎಸೆಯುತ್ತಿದ್ದರು. ಬಾಲ್ಯದಲ್ಲಿ ಹಾಗೆ ಆಡಿದ್ದರಿಂದಲೇ ನಿಖರ ಯಾರ್ಕರ್‌’ಗಳನ್ನು ಬೌಲ್ ಮಾಡಲು ಸಾಧ್ಯವಾಯಿತು ಎಂದು ಬುಮ್ರಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬುಮ್ರಾ ತನ್ನ ತಾಯಿಯಂತೆಯೇ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದರು. ದೇಶದ ಹೆಮ್ಮೆಯ ಬೌಲರ್ ಎನಿಸಿಕೊಂಡರು. ತಮ್ಮ ಸಹಜ ಬೌಲಿಂಗ್ ಮೂಲಕ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link