ತೂಕ ಇಳಿಸಿಕೊಳ್ಳಲು ಬೆಸ್ಟ್ ಬ್ರೇಕ್‌ಫಾಸ್ಟ್‌ಗಳಿವು, ನಿತ್ಯ ಇವುಗಳನ್ನು ತಿಂದ್ರೆ ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್
ಪ್ರಸ್ತುತ ಕಾಲಮಾನದಲ್ಲಿ ಕಳಪೆ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ ಬಹಳ ದೊಡ್ಡ ಸಮಸ್ಯೆಯಾಗಿದೆ. ಆದರೆ, ಮುಂಜಾನೆ ಕೆಲವು ಆಹಾರಗಳ ಸೇವನೆಯಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು.
ಮೊಟ್ಟೆ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ಬೆಳಗಿನ ಉಪಹಾರದಲ್ಲಿ ಒಂದು ಮೊಟ್ಟೆ ಸೇವನೆಯು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿ ಆಗಿದೆ.
ಬಾಳೆಹಣ್ಣು ತೂಕ ನಷ್ಟಕ್ಕೆ ಬಲು ಉಪಯೋಗಿ ಹಾಗೂ ಬಹಳ ಸುಲಭವಾಗಿ ಎಲ್ಲಾ ಋತುಮಾನಗಳಲ್ಲೂ ಸಿಗುವ ಹಣ್ಣು. ಮಾರ್ನಿಂಗ್ ಬ್ರೇಕ್‌ಫಾಸ್ಟ್ ನಲ್ಲಿ ಶಕ್ತಿಯ ಕೇಂದ್ರವಾಗಿರುವ ಬಾಳೆಹಣ್ಣು ಸೇವನೆಯಿಂದ ತೂಕ ವೇಗವಾಗಿ ಕಡಿಮೆಯಾಗುತ್ತದೆ.
ಫೈಬರ್‌ನ ಶ್ರೀಮಂತ ಮೂಲವಾಗಿರುವ ಓಟ್ಸ್ ಸೇವನೆಯು ತೂಕ ನಿರ್ವಹಣೆಗೆ ಬಲು ಉಪಯೋಗಿ ಆಹಾರ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಬೆಳಿಗ್ಗೆ ಬ್ರೇಕ್‌ಫಾಸ್ಟ್ ಸಂದರ್ಭದಲ್ಲಿ ಕಾಫಿ, ಟೀ ಕುಡಿಯುವ ಬದಲಿಗೆ ಗ್ರೀನ್ ಟೀ ಕುಡಿಯುವುದರಿಂದ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ ತೂಕ ಇಳಿಸಲು ಸಹಕಾರಿ ಆಗಿದೆ.
ವಿಟಮಿನ್ ಬಿ ನಲ್ಲಿ ಸಮೃದ್ಧವಾಗಿರುವ ಇಡ್ಲಿಯನ್ನು ಬೆಳಗಿನ ಉಪಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಶಕ್ತಿ ದೊರೆಯುವುದರೊಂದಿಗೆ ತೂಕ ನಷ್ಟವೂ ಸುಲಭವಾಗುತ್ತದೆ.
ತರಕಾರಿ ಹಾಕಿ ತಯಾರಿಸಿದ ಉಪ್ಪಿಟ್ಟು ಮಾರ್ನಿಂಗ್ ಬ್ರೇಕ್‌ಫಾಸ್ಟ್ ಗೆ ಅತ್ಯುತ್ತಮ ಆಹಾರವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.