ತಂದೆ-ಪುತ್ರನ ಅಶುಭ ಯೋಗದಿಂದ ಈ ರಾಶಿಗಳ ಜನರ ಜೀವನದಲ್ಲಿ ಮಾರ್ಚ್ 15ರವರೆಗೆ ಭಾರಿ ಸಂಕಷ್ಟ ಕಾಲ!

Tue, 21 Feb 2023-2:29 pm,

ಕರ್ಕ ರಾಶಿ: ಶನಿ ಮತ್ತು ಸೂರ್ಯನ ಸಂಯೋಜನೆಯು ನಿಮಗೆ ಹಾನಿಕಾರಕ ಸಾಬೀತಾಗಬಹುದು. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಅಷ್ಟಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಮತ್ತು ಶನಿದೇವ ನಿಮ್ಮ ಜಾತಕದ ಸಪ್ತಮೇಶ ಹಾಗೂ ಅಷ್ಟಮೇಶ ಅಂದರೆ ಎರಡೂ ಭಾವಗಳಿಗೆ ಅಧಿಪತಿ ಎಂದರ್ಥ. ಇಲ್ಲಿ ಶನಿಯೂ ಮಾರ್ಕೇಶ ಕೂಡ ಆಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನೀವು ನಿಮ್ಮ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ ಸ್ವಂತ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಬೆಂಬಲ ಸಿಗುವುದಿಲ್ಲ.  ಈ ಸಮಯದಲ್ಲಿ ಕೆಲ ನಿಗೂಢ ಕಾಯಿಲೆಗಳು ನಿಮ್ಮನ್ನು ಕಾಡಬಹುದು.    

ಶನಿ ಮತ್ತು ಸೂರ್ಯನ ಸಂಯೋಜನೆಯು ನಿಮಗೆ ಪ್ರತಿಕೂಲ ಸಬೀತಾಗಲಿದೆ ಏಕೆಂದರೆ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಈ ಮೈತ್ರಿ ಏರ್ಪಡುತ್ತಿದೆ. ಇದರೊಂದಿಗೆ ಶನಿದೇವನು ನಿಮ್ಮ ಸಂಕ್ರಮಣ ಜಾತಕದಲ್ಲಿ ಲಗ್ನ ಭಾವದ ಅಧಿಪತಿಯೂ ಆಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಶೀತ, ಕೆಮ್ಮು ಮತ್ತು ಜ್ವರ ಬರಬಹುದು. ಇದರೊಂದಿಗೆ ಶನಿಯ ಸಾಡೇಸಾತಿಯೂ ನಿಮ್ಮ ಮೇಲೆ ನಡೆಯುತ್ತಿದೆ. ಹೀಗಾಗಿ ನಿಮ್ಮ ವ್ಯಾಪಾರವು ಈ ಸಮಯದಲ್ಲಿ ನಿಧಾನ ಗತಿಯಲ್ಲಿ ಸಾಗಲಿದೆ. ಒಪ್ಪಂದವನ್ನು ಅಂತಿಮಗೊಳಿಸುವಾಗ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.  

ಕುಂಭ ರಾಶಿ: ಶನಿ ಮತ್ತು ಸೂರ್ಯ ದೇವನ ಸಂಯೋಜನೆಯು ಕುಂಭ ರಾಶಿಯವರಿಗೆ ಹಾನಿಕಾರಕ ಸಾಬೀತಾಗಬಹುದು. ಈ ಅವಧಿಯಲ್ಲಿ, ನಿಮ್ಮ ಗಂಟಲು ಮತ್ತು ಬಾಯಿಯಲ್ಲಿ ನೀವು ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ದೇಹದಲ್ಲಿ ಸೋಂಕು ಇರಬಹುದು. ಈ ಅವಧಿಯಲ್ಲಿ ನೀವು ಕೈಗೊಂಡ ಕೆಲಸಗಳು ಹಾಳಾಗಬಹುದು. ಏಕೆಂದರೆ ನಿಮ್ಮ ರಾಶಿಯೊಂದಿಗೆ ಲಗ್ನ ಭಾವದಲ್ಲಿ ಈ ಮೈತ್ರಿ ಏರ್ಪಡುತ್ತಿದೆ. ಇದೇ ವೇಳೆ ಸಂಗಾತಿಯ ಆರೋಗ್ಯವೂ ಹದಗೆಡಬಹುದು. ಕೆಲವು ವಿಷಯಗಳಲ್ಲಿ ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು.   ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)    

ZEENEWS TRENDING STORIES

By continuing to use the site, you agree to the use of cookies. You can find out more by Tapping this link