ಈ ತಿಂಗಳಲ್ಲಿ ಮೂರು ಗ್ರಹಗಳು ಬೆಳಗುವುದು ಈ ಐದು ರಾಶಿಯವರ ಅದೃಷ್ಟ!

Wed, 08 Feb 2023-9:09 am,

2023 ರ ಫೆಬ್ರವರಿ ತಿಂಗಳು ಗ್ರಹಗಳ ಸಾಗಣೆಯ ವಿಷಯದಲ್ಲಿ ಬಹಳ ಮುಖ್ಯವಾಗಿದೆ.  ಈ ತಿಂಗಳಲ್ಲಿ ಸೂರ್ಯ, ಬುಧ, ಶುಕ್ರ  ಎಂಬ ಮಹತ್ವದ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುತ್ತವೆ.  ಈ ನಾಲ್ಕು ಗ್ರಹಗಳ ಸಂಚಾರದಿಂದಾಗಿ, ಫೆಬ್ರವರಿ ತಿಂಗಳು ಐದು ರಾಶಿಯವರ ಜೀವದಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ಐದು ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ.  ಈ ರಾಶಿಯವರು ಅದೃಷ್ಟಶಾಲಿಗಳಾಗಿ ಹೊರ ಹೊಮ್ಮುತ್ತಾರೆ. 

ಮೇಷ ರಾಶಿ :ಫೆಬ್ರವರಿ 2023 ರಲ್ಲಿ ನಡೆಯುವ ಗ್ರಹಗಳ ಸಂಚಾರವು ಮೇಷ ರಾಶಿಯ ಯವರಿಗೆ ಫಲಪ್ರದವಾಗಿರಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆರ್ಥಿಕ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ.  ಹೊರಗಡೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುವುದು.  ಈ ಸಮಯದಲ್ಲಿ ಯಾವ ಕೆಲಸ ಮಾಡಿಸರೂ ಅದೃಷ್ಟ ಬೆನ್ನಿಗಿರಲಿದೆ.  ಅಂದು ಕೊಂಡ ಕೆಲಸ ಪೂರ್ಣಗೊಳ್ಳುತ್ತದೆ. 

ಕಟಕ ರಾಶಿ : ಕರ್ಕಾಟಕ ರಾಶಿಯವರು ಫೆಬ್ರವರಿ ತಿಂಗಳಲ್ಲಿ ನಡೆಯುವ ಗ್ರಹಗಳ ಚಲನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಸಮಯದಲ್ಲಿ, ಪೂರ್ವಜರ ಅಥವಾ ಕುಟುಂಬದ ಆಸ್ತಿಯನ್ನು ಪಡೆದುಕೊಳ್ಳುವ ಅವಕಾಶ ಸಿಗಲಿದೆ. ಶುಕ್ರನ ಪ್ರಭಾವದ ಪರಿಣಾಮವಾಗಿ ಹೊಸ ವ್ಯಾಪಾರ ಅವಕಾಶಗಳು ಹೊರಹೊಮ್ಮುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸೂರ್ಯನ ಪ್ರಭಾವದ ಪರಿಣಾಮವಾಗಿ ಜೀವನದಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನವು ಹೆಚ್ಚಾಗುತ್ತದೆ. ಶಿಕ್ಷಣದ ವಿಷಯದಲ್ಲಿ, ಈ ಸಮಯವು ವಿದ್ಯಾರ್ಥಿಗಳಿಗೆ ಅದ್ಭುತವಾಗಿರುತ್ತದೆ. 

ಕನ್ಯಾರಾಶಿ :ಫೆಬ್ರವರಿ ತಿಂಗಳಲ್ಲಿ ಸಂಭವಿಸುವ ನಾಲ್ಕು ಸಂಕ್ರಮಣಗಳು ಕನ್ಯಾರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿಯಾಗಿರಲಿದೆ. ಈ ಸಮಯದಲ್ಲಿ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿರುವವರು ಹಣವನ್ನು ಉಳಿಸುವುದು ಮತ್ತು ಹೊಸ ಉದ್ಯೋಗ  ಪಡೆಯುವುದು ಸಾಧ್ಯವಾಗುತ್ತದೆ. 

ತುಲಾ ರಾಶಿ :ಫೆಬ್ರವರಿ ತಿಂಗಳು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ನಿಮ್ಮ ಮನಸ್ಸು ಮಕ್ಕಳ ಪ್ರಗತಿಯಿಂದ ತೃಪ್ತವಾಗಿರುತ್ತದೆ.  ಸ್ವಂತ ವ್ಯವಹಾರವನ್ನು ನಡೆಸುವವರಿಗೆ ಗ್ರಹಗಳ ಪ್ರಭಾವದಿಂದ ಲಾಭವಾಗುವುದು.  

ಕುಂಭ ರಾಶಿ : ಫೆಬ್ರವರಿ ತಿಂಗಳು ಕುಂಭ ರಾಶಿಯವರಿಗೆ ಹೆಚ್ಚು ಅನುಕೂಲಕರವಾಗಿರಲಿದೆ.  ಶುಕ್ರ, ಸೂರ್ಯ ಮತ್ತು ಬುಧ ಗ್ರಹಗಳ ಶುಭ ಪ್ರಭಾವವು ನಿಮ್ಮ ಜೀವನದಲ್ಲಿ ಕಂಡುಬರುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ತೀರ್ಥಯಾತ್ರೆಗೆ ಹೋಗಬಹುದು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link