Fenugreek Benefits: ಪುರುಷರ ಲೈಂಗಿಕ ಬಯಕೆ ಹೆಚ್ಚಿಸುವ ಮೆಂತ್ಯ ಕಾಳು; ಪ್ರತಿದಿನ ಅರ್ಧ ಚಮಚ ಸೇವಿಸಿರಿ

Wed, 18 Sep 2024-11:15 pm,

ಮಧುಮೇಹ ಹೊಂದಿರುವವರು ಪ್ರತಿನಿತ್ಯ ಮೆಂತ್ಯ ಕಾಳು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಬಹುದಾಗಿದೆ. ಸಂಶೋಧನೆಯ ಪ್ರಕಾರ, ನಿಯಮಿತವಾಗಿ ಮೆಂತ್ಯ ಕಾಳು ಕಾಳು ಸೇವಿಸಿದ ಜನರಲ್ಲಿ ಮಧುಮೇಹವು ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.  

ಹಾಲುಣಿಸುವ ತಾಯಂದಿರರು ಪ್ರತಿನಿತ್ಯ ಒಂದು ಚಮಚ ಮೆಂತ್ಯ ಕಾಳು ಸೇವಿಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಇದು ಎದೆಯ ಹಾಲಿನ ಹೆಚ್ಚಿಸಲು ಸಹಕಾರಿಯಾಗಿದೆ. ಇದು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ, ಹೀಗಾಗಿ ಹಾಲುಣಿಸುವ ತಾಯಂದಿರರು ಯಾವುದೇ ರೀತಿ ಟೆನ್ಶನ್‌ ಇಲ್ಲದೆ ಮೆಂತ್ಯ ಕಾಳುಗಳನ್ನು ಸೇವಿಸಬಹುದು.

ಮೆಂತ್ಯ ಕಾಳುಗಳು ಲೈಂಗಿಕ ಬಯಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ಮಹಿಳೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಕಡಿಮೆ ಸೆಕ್ಸ್ ಡ್ರೈವ್ ಹೊಂದಿರುವ ಮಹಿಳೆಯರು ಮತ್ತು ಪುರುಷರು ಪ್ರತಿನಿತ್ಯ ಮೆಂತ್ಯ ಕಾಳುಗಳನ್ನು ಸೇವಿಸಬೇಕು. ಮೆಂತ್ಯಕಾಳು ಸೇವನೆಯು ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಸಹ ಸುಧಾರಿಸುತ್ತದೆ ಎಂದು ಹೇಳಲಾಗಿದೆ.

ಮೆಂತ್ಯ ಕಾಳುಗಳು ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಇದನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಜೀರ್ಣ, ವಾಯುವಿನಂತಹ ಅಪಾಯಗಳನ್ನು ನಿವಾರಿಸುತ್ತದೆ. ಕರುಳಿನ ಮೇಲೆ ಹಿತವಾದ ಪರಿಣಾಮ ಬೀರುತ್ತದೆ. ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು, ಸೆಳೆತ ನಿವಾರಿಸಲು ಮೆಂತ್ಯ ಕಾಳು ಪರಿಣಾಮಕಾರಿ. 

ಮೆಂತ್ಯ ಕಾಳುಗಳು ಸೇವನೆಯು ಹಸಿವನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಇದು ಜೀರ್ಣಕ್ರಿಯೆ ಸುಧಾರಿಸುವ ಅತ್ಯುತ್ತಮ ಔಷಧಿಯಾಗಿದ್ದು, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರ ಪರಿಣಾಮ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳು ಹೊಟ್ಟೆ ತುಂಬಿಸುವ ಗುಣ ಹೊಂದಿದ್ದು, ಹೆಚ್ಚು ಕ್ಯಾಲೋರಿಗಳ ಸೇವನೆ ಮಾಡುವುದನ್ನು ತಗ್ಗಿಸುತ್ತದೆ. ಇದು ಹಸಿವು ನಿಯಂತ್ರಿಸುವ ಮೂಲಕ ಸ್ಥೂಲಕಾಯ & ಬೊಜ್ಜನ್ನು ಕರಗಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link