ಈ ಪುಡಿಯನ್ನು ತೆಂಗಿನೆಣ್ಣೆಯ ಜೊತೆ ಬೆರೆಸಿ ಹಚ್ಚಿದರೆ ಬಿಳಿ ಕೂದಲಾಗುವುದು ಕಡು ಕಪ್ಪು! ಅದು ಕೂಡಾ ಒಂದೇ ಬಳಕೆಯಲ್ಲಿ
ಕೆಲವು ಮನೆ ಮದ್ದನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಕೂಡಾ ಉಂಟಾಗುವುದಿಲ್ಲ. ಮುಖ್ಯವಾಗಿ ಖರ್ಚು ಕೂಡಾ ಕಡಿಮೆ.
ಇಂಥಹ ಮನೆಮದ್ದಿನಲ್ಲಿ ಪ್ರಮುಖವಾದದ್ದು ಮೆಂತ್ಯೆ ಸೊಪ್ಪು. ಇದರಲ್ಲಿರುವ ವಿಟಮಿನ್ ಸಿ,ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು ಬಿಳಿ ಕೂದಲಿನ ಸಮಸ್ಯೆಯನ್ನು ಬೇರಿನಿಂದಲೇ ಸರಿ ಮಾಡುತ್ತದೆ.
ಮೆಂತ್ಯೆ ಸೊಪ್ಪು ಕೂದಲು ಉದುರುವುದನ್ನು ತಡೆಯುವುದಲ್ಲದೆ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಇದು ಪರಿಣಾಮಕಾರಿ ಮನೆ ಮದ್ದು.
ಮೆಂತ್ಯೆ ಸೊಪ್ಪನ್ನು ರುಬ್ಬಿಕೊಂಡು ಪೇಸ್ಟ್ ತಯಾರಿಸಿ, ಅದಕ್ಕೆ ಗೋರಂಟಿ ಪುಡಿ, ಇಂಡಿಗೋ ಪೌಡರ್, ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣ ಗಾಢ ಕಪ್ಪು ಬಣಕ್ಕೆ ತಿರುಗುತ್ತದೆ.
ಈಗ ಈ ಕಪ್ಪು ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 2 ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಯಿಂದ ಶಾಶ್ವತ ಪರಿಹಾರ ಸಿಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.