ಸಾಸಿವೆ ಎಣ್ಣೆಗೆ ಈ ಕಾಳುಗಳ ಪುಡಿ ಬೆರೆಸಿ ಹಚ್ಚಿ: ಒಂದೇ ಒಂದು ಬಿಳಿಕೂದಲು ಉಳಿಯದೆ ಗಾಢವಾಗಿ ಕಪ್ಪಾಗುತ್ತೆ!
ರಾಸಾಯನಿಕ ಬಣ್ಣಗಳು ಕೂದಲನ್ನು ಒಂದಷ್ಟು ಸಮಯದವರೆಗೆ ಕಪ್ಪಾಗಿಸುತ್ತದೆ. ಆದರೆ ಅವುಗಳು ಕೂದಲಿಗೆ ಒಳ್ಳೆಯದಲ್ಲ. ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಬಯಸಿದರೆ ಸಾಸಿವೆ ಎಣ್ಣೆ ಮತ್ತು ಮೆಂತ್ಯವನ್ನು ಬಳಸುವುದು ಉತ್ತಮ.
ಸಾಸಿವೆ ಎಣ್ಣೆ ಮತ್ತು ಮೆಂತ್ಯ ಕಾಳುಗಳಲ್ಲಿ ಇರುವ ವಿಟಮಿನ್ ಇ, ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್’ಗಳು ಕೂದಲಿನ ಪೋಷಕಾಂಶದ ಕೊರತೆಯನ್ನು ಹೋಗಲಾಡಿಸಿ ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಕೊಂಚ ಬಿಸಿ ಮಾಡಿ. ಅದಕ್ಕೆ ಮೆಂತ್ಯ ಕಾಳುಗಳ ಪುಡಿಯನ್ನು ಸೇರಿಸಿ. ಪುಡಿಯ ಬಣ್ಣವು ಗಾಢವಾಗುವವರೆಗೆ ಎರಡನ್ನೂ ಒಟ್ಟಿಗೆ ಬಿಸಿ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ಈ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ.
5-6 ಗಂಟೆಗಳ ಕಾಲ ಹಾಗೆಯೇ ಇರಿಸಿ. ನಂತರ ತೊಳೆಯಿರಿ. ಹೀಗೆ ವಾರಕ್ಕೆ 2-3 ಬಾರಿ ಬಳಸಿ. ಕೆಲವೇ ದಿನಗಳಲ್ಲಿ ಕೂದಲು ಬಿಳಿಯಾಗುವುದು ಕಡಿಮೆಯಾಗುತ್ತದೆ. ಇದರೊಂದಿಗೆ ಶುಷ್ಕತೆ, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳೂ ದೂರವಾಗುತ್ತವೆ.
ಆಂಟಿ ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಮೆಂತ್ಯದಲ್ಲಿವೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಕೂಡ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಸಾಸಿವೆಯಲ್ಲಿ ವಿಟಮಿನ್ ಇ ಮತ್ತು ಆ್ಯಂಟಿ ಆಕ್ಸಿಡೆಂಟ್’ಗಳು ಕೂಡ ಇದ್ದು ಕೂದಲನ್ನು ಕಪ್ಪಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.
ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಸುಂದರವಾಗಿರುತ್ತದೆ. ಹಿಂದಿನ ಕಾಲದಲ್ಲಿ ಇದೇ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಈ ಕಾರಣದಿಂದ ಕೂದಲಿನ ಜೀವಿತಾವಧಿಯು ದೀರ್ಘವಾಗಿತ್ತು. ಜೊತೆಗೆ ದಪ್ಪ, ಕಪ್ಪು ಮತ್ತು ಉದ್ದವಾಗಿಯೂ ಇರುತ್ತವೆ.
ಸಾಸಿವೆ ಎಣ್ಣೆಗೆ ಮೆಂತ್ಯ ಕಾಳುಗಳನ್ನು ಬೆರೆಸಿ ಹಚ್ಚಿದರೆ ದುಪ್ಪಟ್ಟು ಲಾಭ. ಈ ಎಣ್ಣೆಯನ್ನು ಹಚ್ಚುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಸಾಸಿವೆ ಮತ್ತು ಮೆಂತ್ಯದಲ್ಲಿರುವ ಔಷಧೀಯ ಗುಣಗಳು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)