ವಾರಕ್ಕೆ 2 ಬಾರಿ ಈ ಕಾಳನ್ನು ಅರೆದು ನೆತ್ತಿಗೆ ಹಚ್ಚಿದರೆ ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿಕೂದಲು
)
ಜನರು ಬಿಳಿಕೂದಲನ್ನು ಮರೆಮಾಡಲು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವುಗಳಲ್ಲಿ ಇರುವ ರಾಸಾಯನಿಕಗಳು ಕೂದಲಿಗೆ ಹೆಚ್ಚು ಹಾನಿಯನ್ನುಂಟುಮಾಡುತ್ತವೆ. ಹೀಗಾಗಿ ಮನೆಮದ್ದುಗಳ ಸಹಾಯದಿಂದ, ನೀವು ಬಿಳಿ ಕೂದಲಿನ ಸಮಸ್ಯೆಯನ್ನು ತೊಡೆದುಹಾಕಬಹುದು
)
ಅಂದಹಾಗೆ ಮೆಂತ್ಯ ಬೀಜಗಳು ಬಿಳಿ ಕೂದಲಿಗೆ ತುಂಬಾ ಪ್ರಯೋಜನಕಾರಿ. ಅವುಗಳಲ್ಲಿರುವ ಪೋಷಕಾಂಶಗಳು ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತವೆ.
)
ಮೆಂತ್ಯ ಬೀಜಗಳು ವಿಟಮಿನ್ ಎ, ಕೆ ಮತ್ತು ಸಿ ಅನ್ನು ಒಳಗೊಂಡಿರುತ್ತವೆ. ಇದು ಬಿಳಿಕೂದಲಿನ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ನೆತ್ತಿಯ ಮೇಲಿನ ತುರಿಕೆಯನ್ನು ಸಹ ತೆಗೆದುಹಾಕುತ್ತದೆ.
ಮೆಂತ್ಯ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲವಿದೆ. ಇದು ತಲೆಹೊಟ್ಟು, ಕೂದಲು ಉದುರುವಿಕೆಯಂತಹ ಇತರ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಮೆಂತ್ಯ ಬೀಜಗಳು ಹೆಚ್ಚಿನ ಪ್ರಮಾಣದ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನ್ನು ಹೊಂದಿದ್ದು ಇದು ಕೂದಲಿಗೆ ಅತ್ಯಂತ ಪ್ರಯೋಜನಕಾರಿ. ಜೊತೆಗೆ ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ.
2 ಚಮಚ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಚೆನ್ನಾಗಿ ಪೇಸ್ಟ್ ಮಾಡಿ. ಆ ಪೇಸ್ಟನ್ನು ಕೂದಲು ಮತ್ತು ನೆತ್ತಿಯ ಮೇಲೆ ಕನಿಷ್ಠ 40 ನಿಮಿಷಗಳ ಕಾಲ ಹಚ್ಚಿ ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.