ಕೂದಲು ಉದುರುವುದನ್ನು ತಕ್ಷಣವೇ ನಿಲ್ಲಿಸಲು ಈ ಬೀಜವೊಂದೇ ಪರಿಹಾರ
ಕೂದಲು ಉದುರುವುದು ಎಲ್ಲರ ಸಾಮಾನ್ಯ ಸಮಸ್ಯೆಯಾಗಿದೆ. ಆಧೂನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿ ಯಿಂದಾಗಿ ಕೂದಲು ಹಾನಿಗೊಳಗಾಗುತ್ತದೆ. ಇದರಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಕೂದಲು ತೆಳುವಾಗುತ್ತ ಹೊದಂತೆ ಅಂದಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಇಂದು ನಾವು ನಿಮಗಾಗಿ ಒಂದು ಮನೆಮದ್ದನ್ನು ತಂದಿದ್ದೇವೆ.
ಚಳಿಗಾಲವು ನಿಮ್ಮ ಕೂದಲನ್ನು ನಿರ್ಜೀವಗೊಳಿಸುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಜನರ ಕೂದಲು ಸಾಮಾನ್ಯಕ್ಕಿಂತ ಹೆಚ್ಚಾಗಿ ಉದುರುತ್ತದೆ. ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಯಲು ಈ ಎರಡು ಪದಾರ್ಥಗಳನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಿ.
ಮೆಂತ್ಯ ಪ್ರಾಚೀನ ಕಾಲದಿಂದಲೂ ಭಾರತೀಯ ಕೂದಲ ರಕ್ಷಣೆಯ ಅವಿಭಾಜ್ಯ ಅಂಗವಾಗಿದೆ ಮತ್ತು ತಲೆಮಾರುಗಳವರೆಗೆ ಉಪಯುಕ್ತ ಮೂಲಿಕೆಯಾಗಿದೆ. ಇದು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಮತ್ತೊಂದೆಡೆ ಈರುಳ್ಳಿ ಸಲ್ಫರ್ ನಿಂದ ಸಮೃದ್ಧವಾಗಿದೆ. ಇದು ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯಂತಹ ವಿವಿಧ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಮೆಂತ್ಯ ಮತ್ತು ಈರುಳ್ಳಿ ಹೇರ್ ಮಾಸ್ಕ್ ಮಾಡಲು ಮೊದಲು ಮೆಂತ್ಯವನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಇವುಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಪೇಸ್ಟ್ ಮಾಡಿ. ಅರ್ಧ ಈರುಳ್ಳಿಯನ್ನು ತುರಿದು ರಸವನ್ನು ಸೋಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಮೆಂತ್ಯ ಪೇಸ್ಟ್ ಮತ್ತು ಈರುಳ್ಳಿ ರಸವನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ನಯವಾದ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಒಂದು ಗಂಟೆ ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.