ಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದು
ಬಿಳಿ ಕೂದಲಿಗೆ ಹಲವೃು ಕಾರಣಗಳಿವೆ. ಪೋಷಕಾಂಶದ ಕೊರತೆ, ಅತಿಯಾದ ರಾಸಾಯನಿಕ ಉತ್ಪನ್ನಗಳ ಬಳಕೆ, ಸರಿಯಾದ ಕಾಳಜಿ ವಹಿಸದಿರುವುದು ಕೂದಲು ಬಿಳಿಯಾಗಲು ಕಾರಣವಾಗುತ್ತದೆ.
ಅತಿಯಾದ ಒತ್ತಡ ಮತ್ತು ಅನಾರೋಗ್ಯದ ಸಮಸ್ಯೆಗಳಿಂದಲೂ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಕೆಲವು ಮನೆಮದ್ದುಗಳಿಂದ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಜೊತೆಗೆ ಉದ್ದ ದಪ್ಪ ಕೂದಲನ್ನೂ ಪಡೆಯುಬಹುದು.
ಮೆಂತ್ಯ ಕಾಳು ಆರೋಗ್ಯದ ಜೊತೆ ಕೂದಲಿಗೂ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಲವಾರು ಔಷಧೀಯ ಗುಣಗಳು ಮೆಂತ್ಯ ಕಾಳಿನಲ್ಲಿದ್ದು, ಬುಡದಿಂದಲೇ ಕೂದಲನ್ನು ಕಪ್ಪಾಗಿಸುವ ಸಾಮರ್ಥ್ಯ ಹೊಂದಿದೆ.
ಮೆಂತ್ಯ ಕಾಳುಗಳಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಅಂಶಗಳು ಹೇರಳವಾಗಿದ್ದು ಕೂದಲನ್ನು ಪೋಷಿಸಲು ಮತ್ತು ಬಿಳಿಯಾಗದಂತೆ ತಡೆಯಲು ಸಹಕಾರಿಯಾಗಿದೆ. ಉದುರುವಿಕೆ ತಡೆದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.
ಮೆಂತ್ಯ ಕಾಳುಗಳಲ್ಲಿ ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ ಇದು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಮೆಂತ್ಯ ಕಾಳು ನೆನೆಸಿದ ನೀರು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಕಾರಿ. ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ಒಂದು ಚಮಚ ಮೆಂತ್ಯ ಕಾಳು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿ ಮಲಗುವ ಮೊದಲು ನೆನೆಸಿಡಬೇಕು. ಬೆಳಗ್ಗೆ ಎದ್ದ ಬಳಿಕ ಬ್ರಷ್ ಮಾಡಿ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ನೀರು ಕುಡಿಯಬೇಕು. ಇದರಿಂದ ಕೂದಲು ಕಪ್ಪಾಗುತ್ತದೆ.
ಮೆಂತ್ಯ ಕಾಳು ನೆನೆಸಿದ ನೀರು ಕುಡಿಯವುದರಿಂದ ಕೂದಲು ಉದುರುವಿಕೆ ಕಡಿಮೆಯಾಗಿ ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ. ಒಂದು ತಿಂಗಳ ವರೆಗೆ ಪ್ರತಿದಿನ ಮೆಂತ್ಯ ಕಾಳು ನೆನೆಸಿದ ನೀರು ಕುಡಿದರೆ ಕ್ರಮೇಣ ಫಲಿತಾಂಶ ಗೋಚರಿಸುವುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.