ಮೊಸರಿಗೆ ಈ ಪುಡಿ ಬೆರೆಸಿ ತಲೆಗೆ ಹಚ್ಚಿ.. 10 ದಿನದಲ್ಲಿ ಬಿಳಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ಎಳೆಯಂತೆ ಹೊಳೆಯುವುದು !
ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ5 ಮತ್ತು ವಿಟಮಿನ್ ಡಿ ಇದೆ. ಹೀಗಾಗಿ ಕೂದಲಿನ ಆರೈಕೆಗಾಗಿ ಇದನ್ನು ಬಳಸಬಹುದು.
ಮೊಸರನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ ತಲೆಹೊಟ್ಟು ನಿವಾರಣೆಯಾಗುತ್ತದೆ. ಕೂದಲನ್ನು ಮೃದುಗೊಳಿಸುತ್ತದೆ.
ಮೊಸರು ನೆತ್ತಿಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ. ಕೂದಲಿಗೆ ಆಳವಾದ ಕಂಡೀಷನಿಂಗ್ ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಕೂಡ ಮೊಸರು ಸಹಾಯ ಮಾಡುತ್ತದೆ.
5 ಚಮಚ ಮೊಸರನ್ನು ತೆಗೆದುಕೊಂಡು ಅದರಲ್ಲಿ 5 ಚಮಚ ಮೆಂತ್ಯ ಪುಡಿನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಪೇಸ್ಟ್ ತಯಾರಿಸಿ.
ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ನೆತ್ತಿಯಿಂದ ತುದಿಯವರೆಗೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಸೌಮ್ಯವಾದ ಶಾಂಪೂ ಬಳಸಿ ತಲೆಸ್ನಾನ ಮಾಡಿ.
ಎರಡು - ಮೂರು ದಿನಕ್ಕೊಮ್ಮೆ ಈ ರೀತಿ ಮಾಡುವುದರಿಂದ ಬಿಳಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ಎಳೆಯಂತೆ ಹೊಳೆಯುವುದು. (ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)