ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಯವರ ಶುಕ್ರ ದೆಸೆ ಆರಂಭ ! ಅಷ್ಟೈಶ್ವರ್ಯ ಒಲಿಯುವ ಸಮಯ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಮಧ್ಯಾಹ್ನ 01.50 ನಿಮಿಷಕ್ಕೆ ಶುಕ್ರ ಸಂಕ್ರಮಣ ನಡೆಯಲಿದೆ. ಶುಕ್ರವು ಸಂಪತ್ತು ಮತ್ತು ಐಷಾರಾಮಿಗಳನ್ನು ನೀಡುವ ಗ್ರಹವಾಗಿದೆ. ಈ ಶುಕ್ರ ಸಂಕ್ರಮಣವು 5 ರಾಶಿಯ ಜನರಿಗೆ ಅಪಾರ ಹಣವನ್ನು ನೀಡುತ್ತದೆ.
ಮೇಷ ರಾಶಿ : ಶುಕ್ರ ಸಂಕ್ರಮಣವು ಮೇಷ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ಈ ಸಮಯ ನಿಮ್ಮ ಜೀವನದ ವಸಂತ ಕಾಲ ಎಂದೇ ಹೇಳಬಹುದು. ಈ ಸಮಯವು ಎಲ್ಲಾ ವಿಷಯದಲ್ಲಿಯೂ ನಿಮ್ಮ ಪರವಾಗಿಯೇ ಇರಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತವೆ. ವ್ಯಾಪಾರಕ್ಕೆ ಈ ಸಮಯ ಉತ್ತಮವಾಗಿರುತ್ತದೆ. ಪ್ರೇಮ ಜೀವನ ಚೆನ್ನಾಗಿರುತ್ತದೆ.
ಮಿಥುನ ರಾಶಿ : ಶುಕ್ರನು ಮಿಥುನ ರಾಶಿಯನ್ನೇ ಪ್ರವೇಶಿಸುತ್ತಿದ್ದಾನೆ. ಹೀಗಾಗಿ ಮಿಥುನ ರಾಶಿಯವರ ಭಾಗ್ಯ ಹೆಚ್ಚಾಗಲಿದೆ. ನಿಮ್ಮ ಸುತ್ತಲಿರುವವರು ನಿಮ್ಮ ಮಾತನ್ನು ಎದುರು ಮಾತನಾಡದೆ ಒಪ್ಪುವ ಕಾಲವಿದು. ನಿಮ್ಮತ್ತ ಜನರ ಆಕರ್ಷಣೆ ಹೆಚ್ಚಾಗುತ್ತದೆ. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಸಿಂಹ ರಾಶಿ : ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ನೀಡುತ್ತದೆ. ಆರ್ಥಿಕ ಸ್ಥಿತಿ ಬಹಳ ಮೇಲಿರುತ್ತದೆ. ಹಿಂದೆಂದೂ ಕಾಣದ ಅಷ್ಟೈಶ್ವರ್ಯ ನಿಮ್ಮದಾಗುವ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ನಿಮ್ಮ ಪ್ರೀತಿಯ ಜೀವನವು ಪ್ರೀತಿಯಿಂದ ತುಂಬಿರುತ್ತದೆ.
ತುಲಾ ರಾಶಿ: ಶುಕ್ರನು ತುಲಾ ರಾಶಿಯ ಅಧಿಪತಿಯಾಗಿದ್ದು, ಶುಕ್ರನ ಈ ಸಂಕ್ರಮಣ ಈ ರಾಶಿಯ ಜನರಿಗೆ ಲಾಭವನ್ನು ನೀಡುತ್ತದೆ. ಪೂರ್ವಿಕರ ಆಸ್ತಿಯಲ್ಲಿ ಭಾಗ ಸಿಗಬಹುದು. ಬಹಳ ದಿನಗಳಿಂದ ನಿಮ್ಮ ಕೈ ಸೇರದೇ ಉಳಿದಿದ್ದ ಹಣ ಇದೀಗ ನಿಮ್ಮದಾಗುವುದು. ಈ ಸಂದರ್ಭದಲ್ಲಿ ಮಾಡುವ ಪ್ರಯಾಣ ಲಾಭದಾಯಕವಾಗಿರಲಿದೆ.
ಮೀನ ರಾಶಿ : ಶುಕ್ರನ ಸಂಚಾರವು ಮೀನ ರಾಶಿಯವರಿಗೆ ಅನೇಕ ವಿಷಯಗಳಲ್ಲಿ ಲಾಭವನ್ನು ನೀಡುತ್ತದೆ. ತಿಳಿಯದ ಮೂಲದಿಂದ ಹಣ ಸಿಗಲಿದೆ. ವ್ಯಾಪಾರದಲ್ಲಿ ತ್ವರಿತ ಪ್ರಗತಿ ಇರುತ್ತದೆ. ಪ್ರಮೋಷನ್-ಇನ್ಕ್ರಿಮೆಂಟ್ ಪಡೆಯಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)